

ಲಿಂಗಸುಗೂರು: ತಾಲೂಕಿನಲ್ಲಿ ಅಂತ್ಯೋದಯ, ಬಿಪಿಎಲ್ ಕಾರ್ಡ್ ಸೇರಿ ಇತರ ಒಟ್ಟು 87,993 ಕಾರ್ಡ್‌ಗಳ ಪೈಕಿ 3,651 ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಅನ್ನ ಯೋಜನೆಯ 8,821 ಪಡಿತರ ಕಾರ್ಡ್‌ಗಳು, 79,172 ಬಿಪಿಎಲ್ ಪಡಿತರ ಕಾರ್ಡ್‌ಗಳು, 9,497 ಎಪಿಎಲ್ ಕಾರ್ಡ್‌ಗಳಿವೆ.
2017ರ ಸರ್ಕಾರದ ಪರಿಷ್ಕೃತ ಮಾನದಂಡ ಪ್ರಕಾರ ಸರ್ಕಾರ ಅಥವಾ ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಆದಾಯ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಮತ್ತು ಗ್ರಾಮೀಣ ಪ್ರದೇಶದ 7.20 ಎಕರೆ ಖುಷ್ಕಿ ಭೂಮಿ ಮತ್ತು 3.20 ಎಕರೆ ನೀರಾವರಿ ಭೂಮಿ ಹೊಂದಿದ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶ ಹೊರತು ಪಡಿಸಿ ನಗರ ಪ್ರದೇಶದಲ್ಲಿ ಒಂದು ಸಾವಿರ ಚದುರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇರುವುದಿಲ್ಲ.
ಇದೀಗ ಬಿಪಿಎಲ್ ಕಾರ್ಡ್ ಹೊಂದಿದವರು 6 ತಿಂಗಳಿಂದ ಪಡಿತರ ಪಡೆಯದೆ ಇರುವ 3,347 ಬಿಪಿಎಲ್ ಕಾರ್ಡ್‌ಗಳು, ಬಿಪಿಎಲ್ ಕಾರ್ಡ್ ಕುಟುಂಬ ತಂತ್ರಾಂಶದ ಪ್ರಕಾರ ಆದಾಯ ತೆರಿಗೆ ಪಾವತಿಸಿದ 259 ಬಿಪಿಎಲ್ ಕಾರ್ಡ್‌ಗಳು, ಸರ್ಕಾರಿ ನೌಕರರ 45 ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಲಿಂಗಸುಗೂರು ತಾಲೂಕಿನಲ್ಲಿ ಅರ್ಹರ ಬಿಪಿಎಲ್ ಕಾರ್ಡ್‌ಗಳು ಯಾವುದೇ ಕಾರಣಕ್ಕೆ ರದ್ದಾಗಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಕಾರ್ಡ್‌ಗಳನ್ನು ಸರ್ಕಾರದ ಆದೇಶದಂತೆ ಎಪಿಎಲ್‌ಗೆ ಬದಲಿಸಲಾಗಿದೆ. ಅಬ್ದುಲ್ ರೌಫ್ ಆಹಾರ ನಿರೀಕ್ಷಕ, ಲಿಂಗಸುಗೂರು.