ಚಿತ್ರ ವಿ-ಚಿತ್ರ: ಬೆರಗು ಮೂಡಿಸುವ ಉತ್ಸಾಹಿ ಬಾಲಕ

sudina 1
Published on

ನವದೆಹಲಿ: ಸಾಮಾನ್ಯವಾಗಿ ಯಾವಾಗಲೂ ಮಕ್ಕಳು ಹಿರಿಯರಿಗಿಂತ ಉತ್ಸಾಹಿಗಳೇ ಆಗಿರುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಇಂಗ್ಲೆಂಡ್​ನ ಕೌಂಟಿಯ ಐದು ವರ್ಷದ ಬಾಲಕ ಟೋನಿ. ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಈ ಬಾಲಕ ತನಗೆ ತಾನೇ ಹತ್ತು ಕಿ.ಮೀ. ನಡಿಗೆಯ ಚಾಲೆಂಜ್ ಸ್ವೀಕರಿಸಿದ್ದಾನೆ.

ಈ ಜೂನ್​ನಲ್ಲಿ ಪ್ರತಿನಿತ್ಯ ನಡೆಯುವ ಮೂಲಕ ತನ್ನ ಗುರಿಯನ್ನು ತಲುಪಲು ನಿರ್ಧರಿಸಿದ್ದಾನೆ. ಲಂಡನ್​ನ ಆಸ್ಪತ್ರೆಯೊಂದಕ್ಕಾಗಿ ಟೋನಿ 500 ಪೌಂಡ್ ಹಣ ಸಂಗ್ರಹಿಸುವ ಉದ್ದೇಶ ಹೊಂದಿದ್ದ. ಈಗಾಗಲೇ 3,90,000 ಪೌಂಡ್ ಸಂಗ್ರಹಿಸಿದ್ದಾನೆ. ಹುಟ್ಟಿದ 41 ದಿನಕ್ಕೇ ದೈಹಿಕ ಹಿಂಸೆಗೆ ಗುರಿಯಾಗಿದ್ದ ಟೋನಿ ಕೃತಕ ಕಾಲುಗಳ ನೆರವಿನಿಂದ ನಡೆಯುತ್ತಿದ್ದಾನೆ. ಇಷ್ಟಾದರೂ ಜೀವನಪ್ರೀತಿ ಕಳೆದುಕೊಳ್ಳದಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net