ಪ್ರೇಯಸಿಯನ್ನು ಖುಷಿಪಡಿಸಲು ಪತ್ನಿಯ ಬೆತ್ತಲೆ ಫೋಟೋ, ವಿಡಿಯೋಗಳನ್ನು ಹರಿಬಿಟ್ಟ ಪತಿ!

wife vedio
Published on

ಭೋಪಾಲ್​: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಸಂತೋಷ ಪಡಿಸಲು ಪತ್ನಿಯ ಬೆತ್ತಲೆ ವಿಡಿಯೋ ಮತ್ತು ಫೋಟೋಗಳನ್ನು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಮಾನವೀಯ ಘಟನೆ ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

ನರಸಿಂಗಪುರದ 28 ವರ್ಷದ ಸಂತ್ರಸ್ತೆ, ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾಳೆ. ಸದ್ಯ ಆಕೆ ಅರೆರಾದ ಕಾಲನಿಯೊಂದರಲ್ಲಿ ವಾಸವಿದ್ದಾಳೆ. ಆಕೆ ಹೇಳುವ ಪ್ರಕಾರ 2015ರಲ್ಲಿ ಜಬಲ್ಪುರ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.

ಆರಂಭದಲ್ಲಿ ಸಂಸಾರದ ಬಂಡಿ ಸುಖವಾಗಿಯೇ ಸಾಗಿದೆ. ಆದರೆ, ನಂತರದ ದಿನಗಳಲ್ಲಿ ಪತಿ ಸಂತ್ರಸ್ತೆಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅನೇಕ ದಿನಗಳವರೆಗೆ ದೈಹಿಕ ಹಾಗೂ ಮಾನಸಿಕವಾಗಿ ಪತಿ ಆಕೆಗೆ ಕಿರುಕುಳ ನೀಡಿದ್ದಾನಂತೆ. ಅಲ್ಲದೆ, ಪತಿ ಮನೆಯವರು ಸಹ ಕಿರುಕುಳ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಪತಿ ಮಹಾಶಯ ಸಂತ್ರಸ್ತೆಯ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್​ ಮಾಡಿ ವೈರಲ್​ ಮಾಡಿದ್ದಾನೆ. ಆತನಿಗೆ ಮೊದಲೇ ಮತ್ತೊಬ್ಬ ಯುವತಿ ಜತೆ ಅಕ್ರಮ ಸಂಬಂಧ ಇತ್ತಂತೆ. ಹೀಗಾಗಿ ತನ್ನ ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿ ಅನೇಕ ಬಾರಿ ವಿಫಲವಾಗಿದ್ದಾನೆ.

ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಿದರೆ ಬೆದರಿಸಿ ಹೇಗಾದರೂ ವಿಚ್ಛೇದನ ಪಡೆದು ಲವರ್​​ ಜತೆ ಹೋಗಬಹುದು ಎಂಬ ದುರಾಸೆಯಿಂದ ಫೋಟೋ ಮತ್ತು ವಿಡಿಯೋಗಳನ್ನು ಜಾಲತಾಣದಲ್ಲಿ ಆರೋಪಿ ಪತಿ ಹರಿಬಿಟ್ಟಿದ್ದಾನೆ.

ಇದೀಗ ಸಂತ್ರಸ್ತೆ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ದೂರು ದಾಖಲಿಸಿರುವ ಪೊಲೀಸರು ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಬೀಬ್​ಗಂಜ್​ ಠಾಣೆ ಎಸ್​ಐ ಸುನಿತಾ ಭಲೆರಾವ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net