ನಾಯಿ ಜತೆ ಆಟ ಆಡ್ತ ಆಡ್ತ ತೆರೆದ ಬಾವಿಗೆ ಬಿದ್ದ ಬಾಲಕ; ನೀರಲ್ಲಿ ಮುಳುಗಿ ಸಾವು

well
Published on

ಉತ್ತರಕನ್ನಡ: ಚಿಕ್ಕ ಮಕ್ಕಳಿದ್ದಾರೆ ಎಂದರೆ ಪಾಲಕರು ಹೆಚ್ಚು ಜಾಗ್ರತೆಯಲ್ಲಿ ಇರುವುದು ಅತ್ಯವಶ್ಯ. ಹೊರಗೆ ಅವರ ಪಾಡಿಗೆ ಆಟ ಆಡುತ್ತಿದ್ದಾರೆ, ಆಡಿಕೊಳ್ಳಲಿ ಎಂದು ಸುಮ್ಮನಾದರೆ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆಯೂ ಇರುತ್ತದೆ. ಆಟವಾಡುತ್ತ ಮಕ್ಕಳು ಪ್ರಾಣ ಕಳೆದುಕೊಂಡ ಪ್ರಕರಣಗಳು ಹಲವು ನಡೆದಿವೆ. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಂದೂರು ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿನ ನಾಗಭೂಷಣ ದಯಾನಂದ ಹೆಗಡೆ (6) ಎಂಬ ಬಾಲಕ ತೋಟದ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾನೆ.

ತೋಟದ ಬಾವಿ ಬಳಿ ನಾಯಿ ಜೊತೆ ಆಟವಾಡುತ್ತಿದ್ದ ಈತ ಆಟ ಆಡುತ್ತ ಆಡುತ್ತ ಆಕಸ್ಮಿಕವಾಗಿ ತೆರೆದ ಬಾವಿಯೊಳಕ್ಕೆ ಬಿದ್ದಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಶಿವಾನಂದ ಚಿತ್ರಗಿ ಬಾವಿಯಿಂದ ಶವ ಹೊರತೆಗೆದರು. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net