ಹುಬ್ಬಳ್ಳಿ: ಇಲ್ಲಿನ ಸಾಯಿಬಾಬಾ ದೇವಸ್ಥಾನದ ಎದುರು ಏಳುವರ್ಷದ ಬಾಲಕ ಲಾರಿ ಚಕ್ರದ ಕೆಳಗೆ ಸಿಲುಕಿ ಮೃತಪಟ್ಟ ದುರ್ಘಟನೆ ನಡೆದಿದೆ..ಜಂಗ್ಲಿಪೇಟೆ ನಿವಾಸಿ ವೀರೇಶ ಹಿರೇಮಠ (7) ಮೃತ ಬಾಲಕ. ಈ ಪುಟ್ಟ ಹುಡುಗ ತಂದೆಯೊಂದಿಗೆ ಸೈಕಲ್ನಲ್ಲಿ ತೆರಳುತ್ತಿದ್ದ. ಈ ವೇಳೆ ಆಯತಪ್ಪಿ ಲಾರಿಯಡಿಗೆ ಬಿದ್ದು ಅವಘಡ ನಡೆದಿದೆ..ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.