

ಎನ್.ಆರ್.ಪುರ: ಶೈಕ್ಷಣಿಕ ವರ್ಷದಲ್ಲಿ ಸದಾ ಪಠ್ಯಗಳಲ್ಲೇ ಮಗ್ನರಾಗುವ ಮಕ್ಕಳಿಗೆ ಮನೋರಂಜನೆಯೂ ಸಹ ಮುಖ್ಯ ಎಂದು ಬಿಇಒ ಕೆ.ಆರ್.ಪುಷ್ಪಾ ತಿಳಿಸಿದರು.
ಲಿಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿಗೆ ಶಿಕ್ಷಣ ಇಲಾಖೆಯಿಂದ ಕಡಿಮೆ ಸಂಪನ್ಮೂಲ ನೀಡುತ್ತೇವೆ. ಆದರೂ ಗ್ರಾಮಸ್ಥರು, ದಾನಿಗಳ ನೆರವಿನಿಂದ ಹಬ್ಬದ ರೀತಿ ಪ್ರತಿಭಾ ಕಾರಂಜಿ ನಡೆಸುತ್ತಾರೆ ಎಂದು ಶ್ಲಾಘಿಸಿದರು.
ಮೆಣಸೂರು ಗ್ರಾಪಂ ಸದಸ್ಯ ಎನ್.ಡಿ.ಪ್ರಸಾದ್ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆಗಳು ಸುಪ್ತವಾಗಿರುತ್ತವೆ. ಪ್ರತಿಭಾ ಕಾರಂಜಿ ಮೂಲಕ ಅನಾವರಣಕ್ಕೆ ಅವಕಾಶವಾಗಲಿದೆ. ಗ್ರಾಮಸ್ಥರು ತುಂಬ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು, ಸದಸ್ಯರಾದ ಶ್ರೀನಾಥ್, ಅಣ್ಣಪ್ಪ, ಯಾಸ್ಮಿನ್, ಉಮಾ, ಎಸ್‌ಡಿಎಂಸಿ ಅಧ್ಯಕ್ಷ ಕುಮಾರೇಶ್, ಇಸಿಒ ರಂಗಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಪದಾಧಿಕಾರಿಗಳಾದ ತಿಮ್ಮೇಶ್, ಗೌರಮ್ಮ, ಗೀತಾ, ಹೇಮರಾಜ್, ಸಿಆರ್‌ಪಿಗಳಾದ ಓಂಕಾರಪ್ಪ, ದೇವರಾಜ್, ಬಿಐಆರ್‌ಟಿ ವಿಜಯಕುಮಾರ್, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ, ರಮೇಶ್, ಆರ್.ನಾಗರಾಜ್ ಇತರರಿದ್ದರು. ದಾನಿಗಳಾದ ಅಶೋಕ್, ಸುನೀಲ್, ವಡಿಯೇಲ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಅವರನ್ನು ಸನ್ಮಾನಿಸಲಾಯಿತು.