

ನವದೆಹಲಿ: ಜಗತ್ತನ್ನೆಲ್ಲ ಆವರಿಸಿರುವ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಇನ್ನೂ ಎಷ್ಟೋ ಕಡೆಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಗ್ರಂಥಗಳನ್ನು ಓದುವ ಅವಕಾಶ ಸೃಷ್ಟಿಯಾಗಿದೆ.
ಹೀಗಾಗಿ ವರ್ಜೀನಿಯಾದ ಕೆಲ್ಲಿ ಪಾಸ್ಸೆ ಎಂಬ ಗ್ರಂಥಪಾಲಕಿ ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆಗೇ ಪುಸ್ತಕ ಕಳುಹಿಸುತ್ತಿದ್ದಾರೆ. ಆನ್ಲೈನ್ ಫಾಮ್ರ್ ಮೂಲಕ ಯಾವ್ಯಾವ ಪುಸ್ತಕಗಳು ಬೇಕೆಂದು ತಿಳಿದುಕೊಂಡು, ಅವನ್ನು ಪ್ಯಾಕ್ ಮಾಡಿ ಡ್ರೋನ್ ಮೂಲಕ ತಲುಪಿಸುತ್ತಿದ್ದಾರೆ. ‘ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಬೇರೆ ಶಾಲೆಗಳಲ್ಲೂ ಇದೇ ನಿಯಮವನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ’ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು. ಕೆಲ್ಲಿ ಅವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.