

ಮುಂಬೈ: ಬೋನಿ ಬ್ಲೂ(Bonnie Blue) ತನ್ನ ಗರ್ಭಧಾರಣೆಯ ಸುತ್ತಲಿನ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಜನವರಿ 2025 ರಲ್ಲಿ 12 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡ ನಂತರ ಬೋನಿ ಬ್ಲೂ ಮುನ್ನೆಲಗೆ ಬಂದರು. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ವೊಂದರಿಂದ ವದಂತಿಗಳು ಸೃಷ್ಟಿಯಾದವು.
ಬೋನಿ ಬ್ಲೂ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಚಾಕೊಲೇಟ್ ಮತ್ತು ಸ್ಪ್ರಿಂಕ್ಲರ್‌ಗಳಿಂದ ಮುಚ್ಚಿದ ಉಪ್ಪಿನಕಾಯಿಯ ಚಿತ್ರವನ್ನು ಹಂಚಿಕೊಂಡಿದ್ದರು. ಇದರ ಮೂಲಕ ತಮ್ಮ ಗರ್ಭಧಾರಣೆಯ ಬಗ್ಗೆ ಸುಳಿವು ನೀಡಿದ್ದಾರೆ ಎಂಬ ವದಂತಿ ಹರಡಿತು. ಅಲ್ಲದೆ ಮಗುವಿಗೆ ಶಾಲೆಯಲ್ಲಿ ಎಂದಿಗೂ ಹಿಂಸೆಯಾಗುವುದಿಲ್ಲ ಏಕೆಂದರೆ ಅದಕ್ಕೆ 1,057 ಅಪ್ಪಂದಿರು ಇದ್ದಾರೆ ಎಂದು ತಮಾಷೆ ಮಾಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಬಳಿಕ, ಬೋನಿ ತಾನು ಗರ್ಭಿಣಿ ಎಂದು ಅಭಿಮಾನಿಗಳನ್ನು ಕೀಟಲೆ ಮಾಡುತ್ತಿರಬಹುದು ಎಂದು ಕೆಲವರು ಸೂಚಿಸಿದಾಗ, ಅವರು ಅದನ್ನು ದ್ವಿಗುಣಗೊಳಿಸಿದಂತೆ ಮತ್ತೊಂದು ವಿಡಿಯೋ ಶೇರ್ ಮಾಡಿದರು. ಎಂಟು ತಿಂಗಳೊಳಗೆ ವಿಶ್ವದ ಅತಿದೊಡ್ಡ ಹೆರಿಗೆಯನ್ನು ಲೈವ್‌ಸ್ಟ್ರೀಮ್(ನೇರ ಪ್ರಸಾರ) ಮಾಡಲು ನಾನು ಉತ್ಸುಕಳಾಗಿದ್ದೇನೆ. ಚಿಂತಿಸಬೇಡಿ ಹುಡುಗರೇ ಈ ಬಾರಿ ನೀವು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಎಂದು ಶೀರ್ಷಿಕೆ ನೀಡಿದ್ದರು.
24 ಗಂಟೆಗಳಲ್ಲಿ ನಾನು ಗರ್ಭಿಣಿ ಎಂದು ಸುಳಿವು ನೀಡಿದ್ದರೂ, ನಾನು ಎಂದಿಗೂ ಗರ್ಭಿಣಿ ಎಂದು ದೃಢಪಡಿಸಿಲ್ಲ ಎಂದು ವದಂತಿಗಳಿಗೆ ಬೋನಿ ತೆರೆ ಎಳೆದಿದ್ದಾರೆ. ನಾನು ಎಂದಿಗೂ ಗರ್ಭಿಣಿ ಎಂದು ದೃಢಪಡಿಸಿಲ್ಲ, ಏಕೆಂದರೆ ನಾನು ಎಂದಿಗೂ ಗರ್ಭಧಾರಣೆಯ ಬಗ್ಗೆ ಸುಳ್ಳು ಹೇಳುವುದಿಲ್ಲ ಎಂದು ಇನ್ನೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನೀವು ಏಕೆ ಗರ್ಭಿಣಿಯಾಗುವುದಿಲ್ಲ ಎಂದು ಕೇಳಿದಾಗ, ನಾನು ಬಹಳ ಸಮಯದಿಂದ ಗರ್ಭಿಣಿಯಾಗಲು ಪ್ರಯತ್ನಿಸಿದೆ. ಪ್ರಾಮಾಣಿಕವಾಗಿ ಅದು ಅತ್ಯಂತ ಏಕಾಂಗಿ ಅನುಭವವಾಗಿತ್ತು. ನೀವು ನಿಜವಾಗಿಯೂ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಹೇಳುವುದಿಲ್ಲ. ಅದು ಹೆಚ್ಚು ಮಾತನಾಡುವ ವಿಷಯವಲ್ಲ. ಆದ್ದರಿಂದ ಯಾರಾದರೂ ಗರ್ಭಧಾರಣೆಯ ಬಗ್ಗೆ ತಮಾಷೆ ಮಾಡುವುದನ್ನು ನಾನು ನೋಡಿದರೆ, ಅದರ ತಮಾಷೆಯ ಭಾಗವನ್ನು ನಾನು ನೋಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ತಾವು ಏಕೆ ಗರ್ಭಣಿಯಾಗಲು ಸಾಧ್ಯವಾಗಲಿಲ್ಲ ಎಂಬುದನ್ನು ವಿವರಿಸಿದ್ದಾರೆ. ಐವಿಎಫ್ ಬಹಳ ದುಬಾರಿಯಾಗಿದೆ. ನಾನು ಆಗ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದೆ, ಅದು ನನ್ನ ಬದುಕು ನನ್ನ ಉಳಿತಾಯದಿಂದ ಸಾಗುತಿತ್ತು. ಆ ಸಮಯದಲ್ಲಿ ಪ್ರತಿ ತಿಂಗಳು ಗರ್ಭಧಾರಣೆಯ ಪರೀಕ್ಷೆಗಳನ್ನು ಮಾಡಿಸುವುದು, ಅಂಡೋತ್ಪತ್ತಿ ಪರೀಕ್ಷೆಗಳು ಮತ್ತು ಫರ್ಟಿಲಿಟಿ ಖರೀದಿ ದುಬಾರಿಯಾಗಿತ್ತು ಎಂದು ಹೇಳಿದ್ದಾರೆ.
ಬೋನಿ ಬ್ಲೂ ಅವರ ನಿಜವಾದ ಹೆಸರು ಟಿಯಾ ಎಮ್ಮಾ ಬಿಲ್ಲಿಂಗರ್. ಅವರು ಪೋರ್ನ್ ನಟಿ ಮತ್ತು ಓನ್ಲಿಫ್ಯಾನ್ಸ್ ಮಾಡೆಲ್ ಆಗಿದ್ದಾರೆ.(ಏಜೆನ್ಸೀಸ್)