ಪಾಳುಬಿದ್ದ ಮನೆಯಲ್ಲಿ ಮನುಷ್ಯನ ತಲೆಬರುಡೆ, ಮೂಳೆ ಪತ್ತೆ! ಫ್ರಿಡ್ಜ್​ನಲ್ಲಿ ಅಡಗಿತ್ತು ಭಯಾನಕ ಸಂಗತಿ | Human Skull

ವಿಜಯವಾಣಿ (56)
Published on

Human Skull: ಹೊರವಲಯದ ಮನೆಯೊಂದರಲ್ಲಿ ಮನುಷ್ಯನ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾದ ಘಟನೆ ಕೇರಳದ ಕೊಚ್ಚಿಯಲ್ಲಿ ವರದಿಯಾಗಿದೆ. ಜನವಸತಿಯಿಲ್ಲದ ಪ್ರದೇಶದಲ್ಲಿ ಪಾಳು ಬಿದ್ದ ನಿವಾಸದಲ್ಲಿ ಮಾನವನ ತಲೆಬುರುಡೆ ಮತ್ತು ಮೂಳೆಗಳನ್ನು ಮನೆಯ ಕೋಣೆಯೊಂದರಲ್ಲಿ ಇರಿಸಲಾಗಿದ್ದ ಫ್ರಿಡ್ಜ್​ನಲ್ಲಿ ಪ್ಯಾಕ್ ಮಾಡಿ ಇಟ್ಟಿರುವುದು ಚೊಟ್ಟಣಿಕ್ಕರ ನಗರ ಪೊಲೀಸರ ಕಣ್ಣಿಗೆ ಬಿದ್ದಿದೆ.

ತರಕಾರಿ ಕತ್ತರಿಸಿ ಇಟ್ಟಂತೆ

ಯಾರೂ ಸಹ ವಾಸಿಸಲು ಬಯಸದ ಇಂತಹ ಪ್ರದೇಶಗಳನ್ನು ಸಮಾಜಘಾತುಕ ಶಕ್ತಿಗಳ ತಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರದೇಶ ಪಂಚಾಯಿತಿ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳವನ್ನು ಶೋಧಿಸಿದ್ದಾರೆ. ಹುಡುಕಾಟದ ಸಮಯದಲ್ಲಿ, ಪಾಳು ಬಿದ್ದ ಮನೆಯೊಂದರಲ್ಲಿದ್ದ ಫ್ರಿಡ್ಜ್ ಅನ್ನು ತೆರೆದ ಪೊಲೀಸರಿಗೆ ಒಂದು ನಿಮಿಷ ಅಚ್ಚರಿ ಉಂಟಾಗಿದ್ದು, ತರಕಾರಿಯನ್ನು ಕತ್ತರಿಸಿ, ಪ್ಯಾಕ್​ ಮಾಡಿ ಇಡುವಂತೆಯೇ ಮನುಷ್ಯನ ತಲೆಬುರುಡೆ ಮತ್ತು ಮೂಳೆಗಳು ಪ್ಯಾಕ್​ ಆಗಿರುವುದು ಪತ್ತೆಯಾಗಿವೆ.

ನಿಖರವಾಗಿ ಹೇಳಲು

ಮೂಳೆಗಳನ್ನು ಮೂರು ಪ್ರತ್ಯೇಕ ಕವರ್‌ಗಳಲ್ಲಿ ಪ್ಯಾಕ್ ಮಾಡಿರುವುದು ಕಂಡುಬಂದಿದೆ. ತಲೆಬುರುಡೆಯು ಹಲವಾರು ವರ್ಷಗಳಷ್ಟು ಹಳೆಯದಾಗಿದೆ ಎಂದು ಪೊಲೀಸರು ತಿಳಿಸಿರುವುದು ಸದ್ಯ ಭಾರೀ ಅನುಮಾನಕ್ಕೆ ಕಾರಣವಾಗಿದೆ. ತಲೆಬುರುಡೆ, ಮೂಳೆ ಯಾರದ್ದು ಎನ್ನುವುದಕ್ಕಿಂತ ಯಾವ ವಯಸ್ಸಿನವರದ್ದು ಎಂಬುದನ್ನು ನಿಖರವಾಗಿ ಹೇಳಲು ಪರೀಕ್ಷೆಯ ನಂತರವೇ ತಿಳಿಸಲು ಸಾಧ್ಯ ಎಂದು ಖಾಕಿ ಪಡೆ ಹೇಳಿದೆ. ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ ಮತ್ತು ಫ್ರಿಡ್ಜ್‌ನಲ್ಲಿ ಕಂಪ್ರೆಸರ್ ಕೂಡ ಇರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.

14 ಎಕರೆ ಜಾಗದಲ್ಲಿರುವ ಈ ಮನೆಯು ಎರ್ನಾಕುಲಂ ಮೂಲದವರ ಒಡೆತನದಲ್ಲಿದೆ ಮತ್ತು ಸುಮಾರು 15-20 ವರ್ಷಗಳಿಂದ ಯಾರೊಬ್ಬರು ಇಲ್ಲಿ ವಾಸವಿರಲಿಲ್ಲ ಎನ್ನಲಾಗಿದೆ. ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಘಟನೆಯ ಬಗ್ಗೆ ಚುರುಕು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net