ಶಿಲ್ಪಾ ಶೆಟ್ಟಿ ವಿದೇಶ ಪ್ರವಾಸ ಕೋರಿಕೆ: ಕುಟುಂಬ ಹಿನ್ನೆಲೆಯ 'ಬ್ಯಾಕ್‌ಗ್ರೌಂಡ್' ಚೆಕ್‌ಗೆ ಹೈಕೋರ್ಟ್ ಆದೇಶ! Shilpa Shetty

Actress Shilpa Shetty
Published on

ಮುಂಬೈ: ಅಕ್ಟೋಬರ್ 22 ರಿಂದ 27 ರವರೆಗೆ 5 ದಿನಗಳ ಕಾಲ ವ್ಯವಹಾರ ನಿಯೋಜನೆಗಾಗಿ ಶಿಲ್ಪಾ ಶೆಟ್ಟಿ (Shilpa Shetty) ಹಾಗೂ ಅವರ ಮಗ ಲಾಸ್ ಏಂಜಲೀಸ್‌ಗೆ ಪ್ರಯಾಣಿಸುತ್ತೇವೆ ಎಂದು ನಟಿ ಸಲ್ಲಿಸಿದ ಅಫಿಡವಿಟ್ ನಂತರ, ಬಾಂಬೆ ಹೈಕೋರ್ಟ್ ಮಂಗಳವಾರ ಪ್ರಾಸಿಕ್ಯೂಷನ್‌ಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಹೊರಡಿಸಿದ ಲುಕ್​ ಔಟ್​ ಸುತ್ತೋಲೆ ಪ್ರಶ್ನಿಸಿ ದಂಪತಿ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಎ. ಅನ್ಖಡ್ ಅವರ ದ್ವಿ ಸದಸ್ಯ ಪೀಠವು ವಿಚಾರಣೆ ನಡೆಸಿತು.

2015 ಮತ್ತು 2023 ರ ನಡುವೆ, ದಂಪತಿಯ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನಲ್ಲಿ 60 ಕೋಟಿ ರೂ. ಹೂಡಿಕೆ ಮಾಡಲು ಪ್ರೇರೇಪಿಸಿದರು. ಆದರೆ ಅವರ ವೈಯಕ್ತಿಕ ಉದ್ದೇಶಗಳಿಗಾಗಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ದೀಪಕ್​ ಕೊಠಾರಿ ಸಲ್ಲಿಸಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ LOC ಹೊರಡಿಸಲಾಗಿದೆ.

ಪ್ರಯಾಣಕ್ಕಾಗಿ 60 ಕೋಟಿ ಠೇವಣಿ

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣ ಬೆಳೆಸುವುದಾದರೆ 60 ಕೋಟಿ ಠೇವಣಿಯನ್ನು ಇಡುವಂತೆ ನ್ಯಾಯಾಲಯವು ದಂಪತಿಗೆ ಸೂಚನೆ ನೀಡಿತ್ತು. ತನಿಖೆ ಬಾಕಿ ಇರುವವರೆಗೂ ಯಾವುದೇ ವಿರಾಮ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಆದೇಶ ನೀಡಿತ್ತು.

ಮಂಗಳವಾರ ಶೆಟ್ಟಿ ಪರ ವಕೀಲರಾದ ನಿರಂಜನ್​ ಮುಂಡರಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಅಕ್ಟೋಬರ್​ 23 ರಂದು ವೃತ್ತಿಪರ ಚಿತ್ರೀಕರಣಕ್ಕಾಗಿ ಶೆಟ್ಟಿ ಏಂಜಲೀಸ್​ಗೆ ಪ್ರಯಾಣಿಸಬೇಕಾಗಿದೆ ಹಾಗೇ 27 ರಂದು ವಾಪಾಸ್ಸು ಬರಲಿದ್ದಾರೆ. ಈ ವೇಳೆ ತಾಯಿ ಮತ್ತು ಅವರ ಮಗ ಮಾತ್ರ ಪ್ರಯಾಣ ನಡೆಸಲಿದ್ದು, ಕುಂದ್ರಾ ಹಾಗೂ ಅವರ ಮಗಳು ಮುಂಬೈನಲ್ಲಿ ಇರುತ್ತಾರೆ. ಹಾಗೆಯೇ ನಾನು ಒಪ್ಪಂದವನ್ನು ಪಾಲಿಸಿದರೆ ಮತ್ತು ಪ್ರಯಾಣಿಸದಿದ್ದರೆ, ನಾನು ಹಣ ಪಾವತಿಸಬೇಕಾಗುತ್ತದೆ. ನ್ಯಾಯಾಲಯದಿಂದ ಅನುಮತಿ ಪಡೆಯದ ಹೊರತು ನಾನು ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಿಲ್ಲ" ಎಂದು ಅವರು ಅರ್ಜಿ ಸಲ್ಲಿಸಿದ್ದಾರೆ.

ಪ್ರಯಾಣದ ಉದ್ದೇಶದಲ್ಲಿ ಬದಲಾವಣೆ

ಆದಾಗ್ಯೂ, ದೂರುದಾರರ ವಕೀಲರು, ದಂಪತಿಗಳು ಆರಂಭದಲ್ಲಿ ಮೂರು ತಿಂಗಳ ವಿರಾಮ ಪ್ರವಾಸಕ್ಕೆ ಅನುಮತಿ ಕೋರಿದ್ದರು, ನಂತರ ನ್ಯಾಯಾಲಯದ ನಿರ್ದೇಶನದ ನಂತರ ಅದನ್ನು ವ್ಯಾಪಾರ ಭೇಟಿಯಾಗಿ ಬದಲಾಯಿಸಲಾಯಿತು ಎಂದು ವಾದಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net