ಬೈಕ್‌ನಲ್ಲಿ ಬಂದು ಶಾಸಕರ ಮನೆಯ ಮೇಲೆ ಬಾಂಬ್ ಎಸೆದ ದುರುಳರು

bikers
ಸಾಂದರ್ಭಿಕ ಚಿತ್ರ
Published on

ಮಣಿಪುರ: ಬಿಜೆಪಿ ಶಾಸಕರೊಬ್ಬರ ನಿವಾಸದ ಮೇಲೆ ಗುರುವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ಎಸೆದಿರುವ ಘಟನೆ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ನಡೆದಿದೆ.

ನವೋರಿಯಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಕೇಬಿ ದೇವಿಯ ಮನೆಯ ಈ ದಾಳಿ ನಡೆದಿದ್ದು, ಘಟನೆ ನಡೆದ ವೇಳೆ ಶಾಸಕರು ಮನೆಯಲ್ಲಿಯೇ ಇದ್ದರು. ಆರೋಪಿಗಳ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ಎಸೆದಿದ್ದು, ಶಾಸಕರ ಮನೆಯ ಗೇಟ್‌ ಬಳಿ ಐಇಡಿ ಬಾಂಬ್​ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿದೆ. ಅದೃಷ್ಟವಶಾತ್​, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈಶಾನ್ಯ ರಾಜ್ಯದ 13 ಜಿಲ್ಲೆಗಳಲ್ಲಿ ಸುದೀರ್ಘವಾದ ಜನಾಂಗೀಯ ಹಿಂಸಾಚಾರವು ನಡೆಯುತ್ತಿದ್ದು ವಿವಿಧ ಸಮುದಾಯಗಳ ಸುಮಾರು 37,450 ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡು, ಸಮುದಾಯ ಭವನ ಸೇರಿದಂತೆ 272 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ 27 ಶಸ್ತ್ರಾಸ್ತ್ರಗಳು ಮತ್ತು 245 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವುದರ ಜತೆಗೆ ಮಣಿಪುರದ ಭದ್ರತಾ ಪಡೆಗಳು ಇದುವರೆಗೆ 896 ಅತ್ಯಾಧುನಿಕ ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು 11,763 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net