ಜೀವನದಲ್ಲಿ ಅತ್ಯಂತ ಕಷ್ಟದ ಸಮಯ; ಸದ್ಯಕ್ಕೆ ಸೋಶಿಯಲ್​​ ಮೀಡಿಯಾ ಕಡೆಗೆ ಬರಲ್ಲವೆಂದ ನಟಿ​​ ಕಾಜೋಲ್​​!

kajol
Published on

ಮುಂಬೈ: ಬಾಲಿವುಡ್​​ ನಟಿ, ಅಜಯ್ ದೇವಗನ್ ಅವರ ಪತ್ನಿ ಕಾಜೋಲ್ ಸಾಮಾಜಿಕ ಜಾಲತಾಣದಲ್ಲಿ ದೂರ ಉಳಿಯುವುದಾಗಿ ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಕಾಜೋಲ್ ತನ್ನ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ನಾನು ಜೀವನದಲ್ಲಿ ಅತ್ಯಂತ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇನೆ ಪೋಸ್ಟ​​​ ಮಾಡಿ,  ಶೀರ್ಷಿಕೆಯಲ್ಲಿ, 'ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ' ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ನಟಿ ಇನ್​ಸ್ಟಾಗ್ರಾಮ್​​, ಟ್ವೀಟ್​​ ಹೀಗೆ ಎಲ್ಲಾ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಕೇವಲ ಒಂದು ಪೋಸ್ಟ್ ಮಾತ್ರ ಕಂಡುಬಂದಿದೆ. ಈ ಹಿಂದಿನ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್​ ಮಾಡಿದ್ದಾರೆ.

ಈ ಪೋಸ್ಟರ್​​ ನೋಡಿದ ಅಭಿಮಾನಿಗಳು ಕಾಮೆಂಟ್​ ಮಾಡುವ ಮೂಲಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್​ ಮೀಡಿಯಾದಿಂದ ದೂರ ಉಳಿಯುತ್ತಿರುವುದು ಯಾಕೆ? ಆಗಿರುವ ಸಮಸ್ಯೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕಾಜೋಲ್ ಇನ್‌ಸ್ಟಾಗ್ರಾಮ್‌ನಲ್ಲಿ 14.4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಮತ್ತು ಫನಾದಂತಹ ಸೂಪರ್ ಹಿಟ್ ಲವ್ ಸಿನಿಮಾಗಳಲ್ಲಿ ನಟಿಸಿ ಹುಡುಗರ ಕನಸಿನ ಕನ್ಯೆ ಎನಿಸಿಕೊಂಡಿದ್ದ ಕಾಜೋಲ್ ಸದ್ಯ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವೆಬ್ ಸೀರೀಸ್ ಗಳಲ್ಲಿ ಮುಖ್ಯ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net