ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ

bomb
Published on

ಬೆಂಗಳೂರು: ನಗರದ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಯಶವಂತಪುರದ ಕೇಂದ್ರೀಯ ವಿದ್ಯಾಲಯಕ್ಕೆ ಕಿಡಿಗೇಡಿಗಳು ಬಾಂಬ್ ಇರಿಸಿರುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜ.೨೮ ರಂದು ಬೆಳಗ್ಗೆ ೭.೩೭ಕ್ಕೆ ಕೇಂದ್ರೀಯ ವಿದ್ಯಾಲಯದ ಅಧಿಕೃತ ಇ-ಮೇಲ್‌ಗೆ ಜ್ಠಚ್ಟಜಿಠ್ಟಜ್ಞಿಜಿಚ್ಟಟ೬೫ಃಜಞಜ್ಝಿ.್ಚಟಞ ಎಂಬ ಇ-ಮೇಲ್‌ನಿಂದ ೞ ಜ್ಞಿ ಟ್ಠ್ಟ ಠ್ಚಟಟ್ಝ ಟ್ಞಛಿ ಚಿಟಞಚಿ ಜಿ ಠಿಛಿಜ್ಟಿ ಜಿಠಿ ಡಿಜ್ಝ್ಝಿ ಚ್ಝಿಠಿ ಠಿಟಞಟ್ಟ್ಟಟಡಿ ಞಟ್ಟ್ಞಜ್ಞಿಜ ೧೦.೨೦ೞ ಎಂಬ ಬೆದರಿಕೆ ಸಂದೇಶ ಬಂದಿದೆ.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಎನ್.ವೈ.ಅಮೃತಬಾಲ ಅವರು ಈ ಬೆದರಿಕೆ ಇ-ಮೇಲ್ ನೋಡಿದ್ದಾರೆ. ಬಳಿಕ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂದು ಭಾನುವಾರ ರಜೆ ಇದ್ದ ಕಾರಣ ಶಾಲೆಗೆ ಮಕ್ಕಳು ಬಂದಿರಲಿಲ್ಲ. ತಕ್ಷಣ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಪೊಲೀಸರು, ಕೇಂದ್ರೀಯ ವಿದ್ಯಾಲಯಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಎಂಬುದು ಖಚಿತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು. ಈ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿರುವ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಈ ಇ-ಮೇಲ್ ವಿಳಾಸದ ಜಾಡು ಹಿಡಿಯಲು ಸೈಬರ್ ಕ್ರೈಂ ತಜ್ಞರ ಸಹಕಾರ ಕೋರಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಕಿಡಿಗೇಡಿಗಳು ನಗರದ ೫೦ಕ್ಕೂ ಅಧಿಕ ಶಾಲೆಗಳ ಇ-ಮೇಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರು. ಇದರಿಂದ ಪಾಲಕರು ಮತ್ತು ಶಿಕ್ಷಕರು ಆತಂಕಗೊಂಡಿದ್ದರು. ಪೊಲೀಸರು ತಪಾಸಣೆ ನಡೆದಿದ್ದಾಗ ಹುಸಿಬಾಂಬ್ ಕರೆ ಎಂಬುದು ಬೆಳಕಿಗೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net