

ನವದೆಹಲಿ: ಕಳೆದ ತಿಂಗಳು ಕೊಲ್ಕತಾದಿಂದ ನಾಗ್ಪುರ್ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ(Flight)ಬಾಂಬ್ ಇರುವುದಾಗಿ ಬೆದಕರಿಕೆ ಕರೆಯ ಆರೋಪ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಯೂ ಇಂಟೆಲಿಜೆನ್ಸಿ ಬ್ಯುರೋ(ಐಬಿ) ಅಧಿಕಾರಿ ಎಂದು ಗುರುತಿಸಲಾಗಿದೆ.
ನಾಗ್ಪುರದಲ್ಲಿ ನಿಯೋಜಿಸಲಾದ ಡೆಪ್ಯುಟಿ ಸೂಪರಿಂಟೆಂಡೆಂಟ್ ಶ್ರೇಣಿಯ IB ಅಧಿಕಾರಿಯೇ ಆರೋಪಿ ಅನಿಮೇಶ್ ಮಂಡಲ್ ಎಂದು ಗುರುತಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351 (4) ಮತ್ತು ನಾಗರಿಕ ವಿಮಾನಯಾನ ಸುರಕ್ಷತೆಯ ವಿರುದ್ಧ ಕಾನೂನುಬಾಹಿರ ಕಾಯಿದೆಗಳ ನಿಗ್ರಹದ ನಿಬಂಧನೆಗಳ ಅಡಿಯಲ್ಲಿ ರಾಯಪುರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಬಂಧನವನ್ನು ಸಮರ್ಥಿಸಿಕೊಂಡಿದ್ದು, ಮಂಡಲ್ ಬಂಧನದ ನಂತರ ತಕ್ಷಣವೇ ಐಬಿಗೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ತನಿಖೆ ಮಾಡುತ್ತಿದ್ದು, ಬೆದರಿಕೆ ಕಾರಣ ಏನು ಎಂಬುವುದು ತಿಳಿಯಲಿದ್ದೇವೆ ಎಂದು ಹೇಳಿದ್ದಾರೆ.
187 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ ಹಿನ್ನೆಲೆ ರಾಯಪುರ್ದ ನಿಲ್ದಾಣ ತುರ್ತು ಭೂಸ್ಪರ್ಶ ಮಾಡಲು ಒತ್ತಾಯಿಸಲಾಗಿತ್ತು. ವಿಮಾನದ ಸಂಪೂರ್ಣ ಪರಿಶೀಲನೆ ಬಳಿಕ ಬೆದರಿಕೆ ಕರೆ ಸುಳ್ಳು ಎಂದು ಘೋಷಿಸಲಾಗಿತ್ತು, (ಏಜೆನ್ಸೀಸ್).