ಹೆಚ್ಚಾಗುತ್ತಿವೆ ಬೆದರಿಕೆ ಕರೆ! 6 ವಿಸ್ತಾರ ವಿಮಾನಗಳಿಗೆ ಬಾಂಬ್ ಭೀತಿ | Bomb Threat

vistara flight
Published on

ನವದೆಹಲಿ: ಇಂದು ಬೆಳಗ್ಗೆಯಷ್ಟೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದ್ದು, ಬಾಂಬ್​ ಭೀತಿ ಮೂಡಿಸಿದವರು ಯಾರು ಎಂದು ಪತ್ತೆಹಚ್ಚಲು ಈಗಾಗಲೇ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಇದು ಮಾಸುವ ಮುನ್ನವೇ ಇದೀಗ ಆರು ವಿಸ್ತಾರ ವಿಮಾನಗಳಿಗೆ ಬಾಂಬ್​ ಬೆದರಿಕೆ ಕರೆ (Bomb Threat) ಬಂದಿರುವುದು ಸದ್ಯ ಅಧಿಕಾರಿಗಳನ್ನು ಭಾರೀ ಆತಂತಕ್ಕೆ ದೂಡಿದೆ.

ಒಟ್ಟು ಆರು ವಿಸ್ತಾರ ವಿಮಾನಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಹೊಸ ಬಾಂಬ್ ಬೆದರಿಕೆ ಕರೆ ಬಂದಿದೆ. ವಿಮಾನಗಳನ್ನು ಸ್ಫೋಟಿಸುವಂತ ಕರೆಗಳು ಬಂದ ಬೆನ್ನಲ್ಲೇ ಇದೀಗ ಅನೇಕ ವಿಮಾನ ನಿಲ್ದಾಣಗಳಲ್ಲಿ ತುರ್ತು ಭದ್ರತಾ ತಪಾಸಣೆ ಶುರುವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ನಿಗದಿಪಡಿಸಲಾಗಿದ್ದ ಆರು ವಿಸ್ತಾರ ವಿಮಾನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಭದ್ರತಾ ಬೆದರಿಕೆಗಳು ಬಂದಿರುವುದನ್ನು ವಿಮಾನಯಾನ ಸಂಸ್ಥೆ ದೃಢಪಡಿಸಿದ್ದು, ಇಂತಹ ಘಟನೆ ವಾಯುಯಾನ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಹಾಗೂ ಪ್ರಯಾಣಿಕರು, ಸಿಬ್ಬಂದಿಗಳಲ್ಲಿ ಭಾರೀ ಆತಂಕ ಸೃಷ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿವೆ. UK25 (ದೆಹಲಿಯಿಂದ ಫ್ರಾಂಕ್‌ಫರ್ಟ್), UK106 (ಸಿಂಗಪುರದಿಂದ ಮುಂಬೈ), UK146 (ಬಾಲಿಯಿಂದ ದೆಹಲಿ), UK116 (ಸಿಂಗಪುರದಿಂದ ದೆಹಲಿ), UK110 (ಸಿಂಗಪುರದಿಂದ ಪುಣೆ) ಮತ್ತು UK107 (ಮುಂಬೈನಿಂದ ಸಿಂಗಾಪುರಕ್ಕೆ) ಫ್ಲೈಟ್​ಗಳು ಸದ್ಯ ಬಾಂಬ್​ ಭೀತಿಯನ್ನು ಎದುರಿಸುತ್ತಿರುವ ವಿಮಾನಗಳು ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net