ಪಾಟ್ನಾ ಕೋರ್ಟ್​ ಆವರಣದಲ್ಲಿ ಬಾಂಬ್​ ಸ್ಫೋಟ: ಪೊಲೀಸ್​ ಅಧಿಕಾರಿಗೆ ಗಾಯ

Patnablast
Published on

ಪಾಟ್ನಾ: ಇಲ್ಲಿನ ಸಿವಿಲ್​ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಕಚ್ಚಾ ಬಾಂಬ್​ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ಪೊಲೀಸರನ್ನೇ ಗುರಿಯಾಗಿರಿಸಿ ಈ ಬಾಂಬ್ ಸ್ಫೋಟಿಸಲಾಗಿದ್ದು, ಸದ್ಯ ಸಬ್​ಇನ್ಸ್​​ಪೆಕ್ಟರ್​​​ ಕೈಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಿರ್ಬಾಹೊರ್​​ ಠಾಣೆಯ ಎಸ್​ಎಚ್​ಒ ಸಬೀಹುಲ್​ ಹಕ್​ ತಿಳಿಸಿದ್ದಾರೆ.

ಇತ್ತೀಚೆಗೆ ಕೆಲ ಕಚ್ಚಾಬಾಂಬ್​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರ ತನಿಖೆಗಾಗಿ ಎಸ್​ಐ ಉಮಾಕಾಂತ್​ ರೈ ಕೋರ್ಟ್​ಗೆ ತೆರಳಿದ ವೇಳೆ ಕಚ್ಚಾ ಬಾಂಬ್​ ಸ್ಫೋಟಿಸಲಾಗಿದೆ.

ಭೀಕರ ಶಬ್ದದಿಂದ ಮೊದಲಿಗೆ ಟೈರ್​ ಸ್ಫೋಟಗೊಂಡಿರಬಹುದು ಎಂದು ಭಾವಿಸಲಾಗಿತ್ತು, ನಂತರ ನೋಡಿದಾಗ ಕಚ್ಚಾ ಬಾಂಬ್ ಸ್ಫೋಟವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕವೇ ಮಾಹಿತಿ ದೊರೆಯಲಿದೆ ಎಂದು ಸಬೀಹುಲ್​ ಹಕ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net