ಪ್ರಿಯಾಂಕಾ ಛೋಪ್ರಾ ಮನೆಯ ಊಟದ ಪ್ಲೇಟ್​ ಬೆಲೆ ಕೇಳಿದ್ರೇ ಶಾಕ್​​! ಶ್ರೀಮಂತಿಕೆ ತೋರಿಸಿ ಟ್ರೋಲ್​ ಆದ ಮಾಜಿ ವಿಶ್ವಸುಂದರಿ

Priyanka2
Published on

ನ್ಯೂಯಾರ್ಕ್​: ಮದುವೆಯಾದ ಬಳಿಕ ಅಮೆರಿಕದಲ್ಲೇ ನೆಲೆಸಿರುವ ಪ್ರಿಯಾಂಕಾ ಛೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಪ್ರಿಯಾಂಕಾ ಆಗ್ಗಾಗ್ಗೆ ಟ್ರೋಲ್​ ಆಗುತ್ತಿರುತ್ತಾರೆ.ಈ ಬಾರಿ ತಮ್ಮ ಮನೆಯಲ್ಲಿ ಬಳಸುವ ದುಬಾರಿ ವಸ್ತುಗಳ ಬೆಲೆ ಬಗ್ಗೆ ಅಭಿಮಾನಿಗಳಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಛೋಪ್ರಾ ಅವರಿಗೆ ಟೀಕೆಗಳ ಸುರಿಮಳೆಯೇ ಹರಿದುಬಂದಿದೆ.

ಹೊಸ ಮನೆಯನ್ನು ಖರೀದಿಸಿರುವ ಪ್ರಿಯಾಂಕಾ ಅದರಲ್ಲಿ ಬಳಸಿರುವ ಪ್ರತಿಯೊಂದು ವಸ್ತುವೂ ಭಾರೀ ದುಬಾರಿಯಾಗಿದ್ದು, ಎಂತಹವರೂ ಹುಬ್ಬೇರಿಸುವಂತಿದೆ. ಒಂದು ಊಟದ ತಟ್ಟೆ ಬೆಲೆಯಲ್ಲೇ ಎಷ್ಟೋ ಮಂದಿ ತಿಂಗಳ ಊಟದ ಖರ್ಚು ಮಾಡುತ್ತಾರೆ. ಈ ಆಡಂಬರ ಬೇಕಿತ್ತಾ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಪ್ರಿಯಾಂಕಾ ಛೋಪ್ರಾ ತಮ್ಮ ಮನೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದು, ಒಂದು ಊಟದ ತಟ್ಟೆಯ ಬೆಲೆ 4700 ರೂ. ಮೇಜು ಬಟ್ಟೆ (ಟೇಬಲ್​ ಕ್ಲಾತ್)​​ 30 ಸಾವಿರ ರೂ. ನೀಡಿದ್ದಾರಂತೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು ಯಾವುದಾದರೂ ರಾಬರಿ ಮಾಡಬೇಕಷ್ಟೇ ಎಂದು ಖಾರವಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net