

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಜಾಯಿಂಟ್ನಲ್ಲಿನ ಬೋಲ್ಟ್-ನಟ್ಗಳು ಬಿಚ್ಚಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗಿದೆ.
ಕೃಷ್ಣರಾಜೇಂದ್ರ ಮಾರುಕಟ್ಟೆ ಮೇಲ್ಸೇತುವೆಯಲ್ಲಿನ ಜಾಯಿಂಟ್ನಲ್ಲಿನ ಸುಮಾರು 1 ಮೀಟರ್ ಉದಕ್ಕೆ ಅಳವಡಿಸಲಾಗಿರುವ ಬೋಲ್ಟ್-ನಟ್ಗಳು ಬಿಚ್ಚಿಕೊಂಡು ಸಡಿಲಗೊಂಡಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾದಂಥ ಪ್ರಸಂಗ ಕಂಡುಬಂದಿತ್ತು.
ಟ್ರಾಫಿಕ್ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಚೀಫ್ ಇಂಜಿನಿಯರ್ ವಿನಾಯಕ್ ಸುಗೂರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುರ್ತುಕ್ರಮ ಕೈಗೊಂಡಿದ್ದಾರೆ. ಮೆಕಾನಿಕಲ್ ಪ್ರಾಬ್ಲಮ್‌ನಿಂದ ಹೀಗಾಗಿದೆ, ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದೇವೆ, ನಾಳೆ ಕೆಲಸ ಸಂಪೂರ್ಣ ಮುಗಿದಿರುತ್ತದೆ. ಸದ್ಯಕ್ಕೆ ವಾಹನಗಳು ಸಂಚರಿಸುತ್ತಿವೆ, ಅಂಥ ತೊಂದರೆ ಏನಿಲ್ಲ ಎಂಬುದಾಗಿ ಚೀಫ್ ಇಂಜಿನಿಯರ್ ತಿಳಿಸಿದ್ದಾರೆ.