ಆಸ್ಪತ್ರೆಯಲ್ಲಿ ಹಿರಿಯ​ ನಟಿ ಸೈರಾ ಬಾನು

saira
Published on

ನವದೆಹಲಿ: ಬಾಲಿವುಡ್​​ನ ಹಿರಿಯ ನಟಿ ಸೈರಾ ಬಾನು ಅವರು ಹೃದಯಾಘಾತವಾಗಿ ಮುಂಬೈನ ಹಿಂದೂಜಾ ಆಸ್ಪತ್ರೆ ಸೇರಿದ್ದಾರೆ. ಮೂರು ದಿನಗಳ ಹಿಂದೆ ಸಣ್ಣ ಪ್ರಮಾಣದ ಹೃದಯಾಘಾತ ಸಂಭವಿಸಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಅವರು ಐಸಿಯುನಲ್ಲಿ ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸೈರಾ ಬಾನು ಅವರು ಇತ್ತೀಚೆಗಷ್ಟೇ ತಮ್ಮ ಪತಿ ಬಾಲಿವುಡ್​ ದಿಗ್ಗಜ ದಿಲೀಪ್​ ಕುಮಾರ್​ ಅವರ ಸಾವಿನ ನೋವುಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದಿಲೀಪ್​ಕುಮಾರ್​, ಕಳೆದ ಜುಲೈ 7 ರಂದು ಅನಾರೋಗ್ಯದಿಂದಾಗಿ ನಿಧನರಾಗಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net