

ಮುಂಬೈ: ಪ್ರಸಿದ್ಧ ಬಾಲಿವುಡ್ ನಟಿಯರ ಬಗ್ಗೆ ಚರ್ಚಿಸುವುದಾದರೆ ವಾಣಿ ಕಪೂರ್ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ. ತನ್ನ ಅದ್ಭುತ ನಟನೆಯ ಜೊತೆಗೆ, ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ ವಾಣಿ. ಅಂದಹಾಗೆ ನಟಿಯ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ವಾಣಿ ತನ್ನ ಕಿಲ್ಲರ್ ಲುಕ್ನಿಂದ ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ.
ವಾಣಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಈ ಕಾರಣದಿಂದಾಗಿ ನಟಿಯ ಫೋಟೋ ಅಥವಾ ವಿಡಿಯೋಗಳು ಸದಾ ಚರ್ಚೆಯಲ್ಲಿರುತ್ತವೆ. ಮಂಗಳವಾರವೂ ಇದೇ ರೀತಿಯ ವಾಣಿ ಕಪೂರ್ ಅವರ ಫೋಟೋಗಳು ವೈರಲ್ ಆಗಿವೆ. ಹೌದು, ಇಂದು ವಾಣಿ ಕಪೂರ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಾಣಿ ಬ್ಯಾಕ್ ಲೆಸ್ ಹೈ ಸ್ಲಿಟ್ ಗೌನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಉಡುಪಿನಲ್ಲಿ ವಾಣಿ ಕಪೂರ್ ತುಂಬಾ ಸುಂದರವಾಗಿ ಮತ್ತು ಅದ್ಭುತವಾಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಈ ಫೋಟೋದಲ್ಲಿ ಅವರ ಹಾಟ್ನೆಸ್ ತುಸು ಹೆಚ್ಚಾಗಿರುವುದನ್ನು ಸುಲಭವಾಗಿ ಊಹಿಸಬಹುದು. ವಾಣಿ ಕಪೂರ್ ತನ್ನ ಕಿಲ್ಲರ್ ಲುಕ್ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ.