ಇಬ್ಬರ ಹೆಂಡಿರ ಮುದ್ದಿನ ಗಂಡ ಧರ್ಮೇಂದ್ರರನ್ನು ಇಷ್ಟಪಡ್ತಿದ್ರು ಈ ಬಾಲಿವುಡ್ ಸ್ಟಾರ್ ನಟಿ! ಅವರೆಂದರೆ ಹುಚ್ಚು ಪ್ರೇಮ...

ನಟ ಧರ್ಮೇಂದ್ರ
ನಟ ಧರ್ಮೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ನಟ ಧರ್ಮೇಂದ್ರ ಕೊನೆಯುಸಿರು
  • 80-90ರ ದಶಕದಲ್ಲಿ ಹಿಂದಿ ಚಿತ್ರೋದ್ಯಮವನ್ನು ಆಳಿದ ಸ್ಟಾರ್​ ಹೀರೋ
  • ಇಬ್ಬರ ಹೆಂಡಿರ ಮುದ್ದಿನ ಗಂಡ
ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ನಿನ್ನೆ (ನ.24) ಬೆಳಗ್ಗೆ ತೀವ್ರ ಅನಾರೋಗ್ಯ ಸಮಸ್ಯೆಗಳಿಂದ ಕೊನೆಯುಸಿರೆಳೆದರು. 80-90ರ ದಶಕದಲ್ಲಿ ಹಿಂದಿ ಚಿತ್ರೋದ್ಯಮವನ್ನು ಆಳಿದ ಈ ಸ್ಟಾರ್​ ಹೀರೋ, ಹಲವಾರು ಸೂಪರ್​ಹಿಟ್​ ಸಿನಿಮಾಗಳ ಮೂಲಕ ಹಿಂದಿ ಪ್ರೇಕ್ಷಕರನ್ನು ರಂಜಿಸಿ, ಇಂದು ದಿಗ್ಗಜ ನಟರ ಸಾಲಿಗೆ ಸೇರಿದ್ದಾರೆ. ಧರ್ಮೇಂದ್ರ ಅಗಲಿಕೆಗೆ ಬಾಲಿವುಡ್​ ಸೇರಿ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಮಧ್ಯೆ, ಅವರಿಗೆ ಸಂಬಂಧಿಸಿದ ಹಲವಾರು ಆಸಕ್ತಿಕಾರಿ ಸಂಗತಿಗಳು ಇದೀಗ ಹೊರಬೀಳುತ್ತಿವೆ.

ಇಬ್ಬರ ಹೆಂಡಿರ ಮುದ್ದಿನ ಗಂಡ

ಧರ್ಮೇಂದ್ರ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, 1954ರಲ್ಲಿ 19ನೇ ವಯಸ್ಸಿನಲ್ಲಿ ತಮ್ಮ ಪ್ರೇಯಸಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು. ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತ ಡಿಯೋಲ್ ಮತ್ತು ಅಜಿತಾ ಡಿಯೋಲ್.
ಇನ್ನು ಚಿತ್ರರಂಗ ಪ್ರವೇಶಿಸಿದ ಬಳಿಕ, ಧರ್ಮೇಂದ್ರ ಅವರು ನಟಿ ಹೇಮಾ ಪ್ರೀತಿಸಿ, ವಿವಾಹವಾದರು. ಧರ್ಮೇಂದ್ರ ಹೇಮಾ ಮಾಲಿನಿಯೊಂದಿಗೆ ಹಲವಾರು ಸಿನಿಮಾಗಳನ್ನು ಮಾಡಿದರು. ಹೀಗೆ ಇಬ್ಬರ ಮಧ್ಯೆ ಪ್ರೀತಿ ಶುರುವಾಯಿತು. ಅವರ ಎಂಟ್ರಿಯೊಂದಿಗೆ, ಧರ್ಮೇಂದ್ರ ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ಹೇಮಾ ಮಾಲಿನಿಯನ್ನು ಮದುವೆಯಾದರು. ಇದು ಆ ಸಮಯದಲ್ಲಿ ದೊಡ್ಡ ವಿವಾದಕ್ಕೆ ಗುರಿಯಾಯಿತು.

ಪತ್ನಿಯರ ಬಗ್ಗೆ ಗೊತ್ತಿದ್ರು...

ಅತ್ತ ಹೇಮಾ ಮಾಲಿನಿ ಅವರಂತೆಯೇ ಸೂಪರ್​ ಸ್ಟಾರ್​ ಆಗಿ ಬಾಲಿವುಡ್​ ಅಂಗಳದಲ್ಲಿ ಮಿಂಚುತ್ತಿದ್ದ ನಟಿ ಮೀನಾ ಕುಮಾರಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಯಶಸ್ಸು ಮತ್ತು ತಾರಾಪಟ್ಟವನ್ನು ಪಡೆದವರು. ಉತ್ತುಂಗದಲ್ಲಿದ್ದಾಗಲೇ ಮೀನಾ ಕುಮಾರಿ ಅನಿರೀಕ್ಷಿತವಾಗಿ ನಿರ್ದೇಶಕ ಕಮಲ್ ಅಮ್ರೋಹಿಯನ್ನು ವಿವಾಹವಾದರು. ಆದರೆ, ನಟಿ ತಮ್ಮ ದಾಂಪತ್ಯದಲ್ಲಿ ಸಂತೋಷವಾಗಿರಲಿಲ್ಲ ಮತ್ತು ಕಮಲ್‌ ಅವರೊಂದಿಗೆ ಭಿನ್ನಾಭಿಪ್ರಾಯಗಳಿತ್ತು ಎನ್ನಲಾಗಿದೆ. ಇದೇ ವೇಳೆ ಅವರು ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು.
ಮೀನಾ ಕುಮಾರಿ ಮತ್ತು ಧರ್ಮೇಂದ್ರ ಜೋಡಿ 'ಕಾಜಲ್', 'ಫೂಲ್ ಔರ್ ಪತ್ತರ್', 'ಚಂದನ್ ಕಾ ಪಲ್ನಾ', 'ಮಜ್ಹಿಲ್ ದೀದಿ', 'ಪೂರ್ಣಿಮಾ', 'ಬಹ್ರನ್ ಕಿ ಮಂಜಿಲ್' ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದು ಅವರಿಬ್ಬರ ನಡುವೆ ಬಾಂಧವ್ಯವನ್ನು ಹೆಚ್ಚಿಸಿತು. ಮೀನಾ ಕುಮಾರಿ ಧರ್ಮೇಂದ್ರರನ್ನು ಇಷ್ಟಪಟ್ಟರು. ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದ ಸಮಯದಲ್ಲೇ ಅವರು ಧರ್ಮೇಂದ್ರರನ್ನು ಹಲವು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಪರಿಚಯ ಮಾಡಿಸಿಕೊಟ್ಟರು. ಧರ್ಮೇಂದ್ರ ಅವರ ಸ್ಟಾರ್​ಡಮ್​ಗೆ ಮೀನಾ ಕುಮಾರಿ ಕೂಡ ಒಂದು ರೀತಿಯಲ್ಲಿ ಕಾರಣರಾದರು.
ಆದಾಗ್ಯೂ, ಮೀನಾ ಕುಮಾರಿ ಅವರು 38ನೇ ವಯಸ್ಸಿನಲ್ಲಿ ಕೌಟುಂಬಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದ ಮರಣ ಹೊಂದಿದರು. ಧರ್ಮೇಂದ್ರ - ಮೀನಾ ಕುಮಾರಿ ಪ್ರೇಮಕಥೆ ಬಾಲಿವುಡ್‌ನಲ್ಲಿ ಬಹುತೇಕರಿಗೆ ತಿಳಿದಿದೆ. ಸಿನಿ ಮೂಲಗಳ ಪ್ರಕಾರ, ಈ ವಿಷಯ ಅವರ ಪತಿಗೂ ಗೊತ್ತಿತ್ತು ಎನ್ನಲಾಗಿದೆ. ಮೀನಾ ಕುಮಾರಿಯ ಪತಿ ಕಮಲ್ ಕೂಡ ಈ ವಿಷಯದಲ್ಲಿ ಧರ್ಮೇಂದ್ರನ ಮೇಲೆ ದ್ವೇಷ ಕಾರಿದ್ದರಂತೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net