ಗೋಲ್ಡನ್ ಕಲರ್ ಡ್ರೆಸ್ ಧರಿಸಿ ರ‍್ಯಾಂಪ್ ವಾಕ್ ಮಾಡಿದ ಸಾರಾ…'ನಡಿಗೆಯಲ್ಲಿಯೂ ಓವರ್ ಆಕ್ಟಿಂಗ್' ಎಂದು ಟ್ರೋಲ್ ಮಾಡಿದ ನೆಟ್ಟಿಗರು

saraaaa
Published on

ಮುಂಬೈ: ಸಾರಾ ಅಲಿ ಖಾನ್ ಬಾಲಿವುಡ್‌ನ ಪ್ರತಿಭಾವಂತ ಯುವ ನಟಿಯರಲ್ಲಿ ಒಬ್ಬರು. ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮಂಗಳವಾರ ರಾತ್ರಿ, ನಟಿ ಮುಂಬೈನಲ್ಲಿ ಜಿಯೋ ವರ್ಲ್ಡ್ ಪ್ಲಾಜಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರಾ ಸೀಕ್ವಿನ್ ಗೋಲ್ಡನ್ ದಿರಿಸು ಧರಿಸಿ ರ‍್ಯಾಂಪ್ ವಾಕ್ ಕೂಡ ಮಾಡಿದ್ದಾರೆ, ಆದರೀಗ ಅವರು ಇದೇ ಕಾರಣಕ್ಕಾಗಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.

ಸಮಾರಂಭದಲ್ಲಿ ಸಾರಾ ಅಲಿ ಖಾನ್ ಬಹಳ ಸೊಗಸಾದ ಅವತಾರದಲ್ಲಿ ಆಗಮಿಸಿದರು. ಗೋಲ್ಡನ್ ಕಲರ್ ಫುಲ್ ಸ್ಲೀವ್ ಟಾಪ್ ಅನ್ನು ಗೋಲ್ಡನ್ ಕಲರ್ ಸೀಕ್ವಿನ್ಸ್ ಸ್ಕರ್ಟ್ ಜೊತೆ ಮ್ಯಾಚ್ ಮಾಡಿದ್ದರು. ಗ್ಲಾಮರ್​​​​ ಲುಕ್‌ನೊಂದಿಗೆ ಬನ್ ಹೇರ್ ಸ್ಟೈಲ್ ಸಹ ಮಾಡಿಕೊಂಡಿದ್ದರು. ಈ ಲುಕ್​​​ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ನಟಿಯ ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತಮ್ಮ ರ‍್ಯಾಂಪ್ ವಾಕ್‌ಗಾಗಿ ಟ್ರೋಲ್ ಆಗಲು ಪ್ರಾರಂಭಿಸಿದರು.

ರ‍್ಯಾಂಪ್ ವಾಕ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮದವರು ಟ್ರೋಲ್ ಮಾಡಿದ್ದಾರೆ. "ಯಾರಾದರೂ ಆಕೆಗೆ ಹೇಳಿ, ಕಾರ್ಟೂನ್‌ನಂತೆ ಕಾಣುತ್ತಿದ್ದಾರೆ." "ಇದು ಫ್ಯಾಶನ್ ಶೋ ಅಲ್ಲ ಸಹೋದರಿ, ನೀವು ಸ್ವಲ್ಪ ಬುದ್ಧಿವಂತಿಕೆಯನ್ನು ಬಳಸಬೇಕಾಗಿತ್ತು." "ಆಕೆಗೆ ನಡೆಯಲು ಕಲಿಸಿ, ತುಂಬಾ ತಮಾಷೆಯಾಗಿ ಕಾಣುತ್ತಿದ್ದಾರೆ, "ಏಕೆ ತುಂಬಾ ತಮಾಷೆಯಾಗಿ ನಡೆಯುತ್ತಾರೆ?" "ನಡಿಗೆಯಲ್ಲಿ ಅತಿಯಾದ ನಟನೆ ಇದೆ." ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಸಮಾರಂಭದಲ್ಲಿ ಸಾರಾ ಅವರಲ್ಲದೆ, ಅರ್ಜುನ್ ಕಪೂರ್, ರಣವೀರ್ ಸಿಂಗ್, ನೋರಾ ಫತೇಹಿ, ಡಯಾನಾ ಪೆಂಟಿ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಹ ರಾಂಪ್ ವಾಕ್ ಮಾಡಿದ್ದಾರೆ.

ಸಾರಾ ಅಲಿ ಖಾನ್ ಕೊನೆಯದಾಗಿ ವಿಕ್ಕಿ ಕೌಶಲ್ ಅವರೊಂದಿಗೆ 'ಜರಾ ಹಟ್ಕೆ ಜರಾ ಬಚ್ಕೆ' ನಲ್ಲಿ ಕಾಣಿಸಿಕೊಂಡರು. ಈ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯಿತು. ಈ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 115 ಕೋಟಿ ರೂ.ಗೂ ಹೆಚ್ಚು ಗಳಿಸಿತ್ತು. ಸಾರಾ ಪ್ರಸ್ತುತ ಅನುರಾಗ್ ಬಸು ಅವರ ಮುಂಬರುವ ಚಿತ್ರ 'ಮೆಟ್ರೋ...ಇನ್ ಡೇಸ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಸಾರಾ ಆದಿತ್ಯ ರಾಯ್ ಕಪೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವು ಮಾರ್ಚ್ 24, 2024 ರಂದು ಬಿಡುಗಡೆಯಾಗಲಿದೆ. ಇದಲ್ಲದೆ, ಟೈಗರ್ ಶ್ರಾಫ್ ಮತ್ತು ಹಿತೇನ್ ಪಟೇಲ್ ಅವರೊಂದಿಗೆ ನಿರ್ದೇಶಕ ಜಗನ್ ಶಕ್ತಿ ಅವರ ಮುಂಬರುವ ಥ್ರಿಲ್ಲರ್ ಚಿತ್ರ 'ಮಿಷನ್ ಲಯನ್' ನಲ್ಲಿಯೂ ಸಾರಾ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net