ಸೀರೆಯೊಂದಿಗೆ ಚುನರಿ ಧರಿಸಿದ ಕಂಗನಾ, ನೀಲಿ ಸಾರಿಯಲ್ಲಿ ಆಲಿಯಾ; ರಾಮಮಂದಿರ ಉದ್ಘಾಟನೆಯಲ್ಲಿ ಸೆಲೆಬ್ರಿಟಿಗಳ ಲುಕ್ ಹೇಗಿತ್ತು ನೋಡಿ…

kangana
Published on

ಅಯೋಧ್ಯೆ: ಬಾಲಿವುಡ್‌ ಕ್ವೀನ್ ಕಂಗನಾ ರಣಾವತ್ ಅವರು ರಾಮ ಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸಲು ಎಷ್ಟು ಉತ್ಸುಕರಾಗಿದ್ದರು ಎಂದರೆ ಅವರು ಎರಡು ದಿನ ಮುಂಚಿತವಾಗಿ ಅಯೋಧ್ಯೆಗೆ ತಲುಪಿದ್ದರು. ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ದಿನದಂದು, ನಟಿ ಆಫ್-ವೈಟ್ ಶೇಡ್ ಸೀರೆಯನ್ನು ಧರಿಸಿ ಆಗಮಿಸಿದರು.

ಕಂಗನಾ ರಣಾವತ್ ಈ ಸೀರೆಯನ್ನು ವಿಶೇಷ ರವಿಕೆಯೊಂದಿಗೆ ಧರಿಸಿದ್ದರು. ಸೀರೆ ಮೇಲೆ ಜಪಮಾಲೆ ಮತ್ತು ಸ್ವಸ್ತಿಕದ ಚಿಹ್ನೆ ಸಹ ಇತ್ತು. ನಟಿ ಸೀರೆಯೊಂದಿಗೆ ಚುನರಿ ಧರಿಸಿ ಅದ್ಭುತವಾಗಿ ಕಂಗೊಳಿಸುತ್ತಿದ್ದರು.

ನಟಿ ಕತ್ರಿನಾ ಕೈಫ್ ಕೂಡ ತಮ್ಮ ಪತಿ ಮತ್ತು ನಟ ವಿಕ್ಕಿ ಕೌಶಲ್ ಅವರೊಂದಿಗೆ ಅಯೋಧ್ಯೆ ತಲುಪಿದ್ದಾರೆ. ಈ ಸಮಯದಲ್ಲಿ, ಅವರು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ವಿಕ್ಕಿ ಕೆನೆ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡರು.

ಜನಪ್ರಿಯ ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಣಬೀರ್ ಬಿಳಿ ಧೋತಿ ಮತ್ತು ಕುರ್ತಾ ಧರಿಸಿ ಕಾಣಿಸಿಕೊಂಡಿದ್ದರು. ಆಲಿಯಾ ಭಟ್ ನೀಲಿ ಬಣ್ಣದ ಬನಾರಸಿ ರೇಷ್ಮೆ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಬಿ-ಟೌನ್‌ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಕೂಡ ರಾಮಮಂದಿರ ಉದ್ಘಾಟನೆಯಲ್ಲಿ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಬನ್‌ ಹೇರ್​​ ಸ್ಟೈಲ್, ಹಳದಿ ಸೀರೆಯೊಂದಿಗೆ ಸುಂದರವಾಗಿ ಕಾಣಿಸಿಕೊಂಡರು.

ನಟ ಆಯುಷ್ಮಾನ್ ಖುರಾನಾ ಕೂಡ ಅಯೋಧ್ಯೆಗೆ ಆಗಮಿಸಿದ್ದರು. ಈ ಸಮಯದಲ್ಲಿ ಬಿಳಿ ಬಣ್ಣದ ಕುರ್ತಾದೊಂದಿಗೆ ಹ್ಯಾಂಡ್​​ಸಮ್​​ ಆಗಿ ಕಾಣುತ್ತಿದ್ದರು.

ಇವರಲ್ಲದೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಈ ಕಾರ್ಯಕ್ರಮದ ಭಾಗವಾದರು. ಬಿಳಿ ಕುರ್ತಾದಲ್ಲಿ ಕಾಣಿಸಿಕೊಂಡರು. ಇದರೊಂದಿಗೆ ಅವರು ಜಾಕೆಟ್ ಸಹ ಧರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net