

ಮುಂಬೈ: ಮಾಜಿ ವಿಶ್ವಸುಂದರಿ ಮತ್ತು ಬಾಲಿವುಡ್ ನಟಿ(Bollywood Actress) ಮಾನುಷಿ ಛಿಲ್ಲರ್ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದು, ಇದೇ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಉರ್ಫಿ ಜಾವೇದ್ ಆಕೆಯ ಸೌಂದರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳ ಸುರಿಮಳೆಗರೆದಳು.
ಮಾನುಷಿ - ಉರ್ಫಿ ರೆಡ್ ಕಾರ್ಪೆಟ್ ಮೇಲೆ ನಗುಮೊಗದಿಂದಲೇ ಪರಸ್ಪರ ಸ್ವಾಗತಿಸಿಕೊಂಡರು. ಉರ್ಫಿ ತೊಟ್ಟಿದ್ದ ವಿಚಿತ್ರ ಡ್ರೆಸ್ ನಿಂದಾಗಿ ಆತ್ಮೀಯವಾಗಿ ಅಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾನುಷಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉರ್ಫಿ.. "ಕ್ಷಮಿಸಿ.. ನಾನು ಈಗ ನಿನ್ನನ್ನು ಅಪ್ಪಿಕೊಳ್ಳಲೂ ಸಾಧ್ಯವಿಲ್ಲ. ನೀನು ಸುಂದರವಾಗಿ ಕಾಣುತ್ತೀಯ. ನೀನು ತುಂಬಾ ಹಾಟ್. ನಿನ್ನ ಸೌಂದರ್ಯದಿಂದ ನಾನು ನಿನ್ನನ್ನು ದ್ವೇಷಿಸುತ್ತೇನೆ" ಎಂದಳು.
ಇದಕ್ಕೆ ಮಾನುಷಿ ಮುಗುಳ್ನಗುತ್ತಲೇ ಥ್ಯಾಂಕ್ಯೂ ಎಂದು ಉತ್ತರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಹರಿಯಾಣದ ಮಾನುಷಿ ಚಿಲ್ಲರ್ 2017 ರಲ್ಲಿ ವಿಶ್ವಸುಂದರಿ ಆದರು. ನಂತರ ಸಿನಿಮಾಗೆ ಎಂಟ್ರಿ ಕೊಟ್ಟರು. ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಆಕೆಯ ಚೊಚ್ಚಲ ಚಿತ್ರ. ಅವರು 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಮತ್ತು 'ಬಡೆ ಮಿಯಾ ಛೋಟೆ ಮಿಯಾ' ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಜಾನ್ ಅಬ್ರಹಾಂ ಅಭಿನಯದ 'ಟೆಹ್ರಾನ್' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.