ತೆಲುಗಿಗೆ ನರ್ಗಿಸ್ : ಟಾಲಿವುಡ್‌ಗೆ ಡೆಬ್ಯೂ ಮಾಡಿದ ಬಾಲಿವುಡ್ ನಟಿ

ನರ್ಗಿಸ್​ ಫಖ್ರಿ
ನರ್ಗಿಸ್​ ಫಖ್ರಿ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿ, ಹಾಲಿವುಡ್ ನಲ್ಲಿ ಮಿಂಚಿರುವ ಅಮೆರಿಕನ್​ ಮೂಲದ ನಟಿ
  • ಇದೀಗ ತೆಲುಗು ಚಿತ್ರರಂಗದಲ್ಲೂ ಛಾಪು ಮೂಡಿಸಲು ಸಿದ್ಧ
  • ನಾನು ರೆಡಿ ಚಿತ್ರದ ವಿಶೇಷ ಸಾಂಗ್ ನಲ್ಲಿ ಕುಣಿದು ಕುಪ್ಪಳಿಸಿದ ನಟಿ
ಅಮೆರಿಕ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಖ್ರಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಗ್ಲಾಮರ್, ಬೋಲ್ಡ್ ಪಾತ್ರಗಳಲ್ಲಿ, ವಿಶೇಷ ಹಾಡುಗಳಲ್ಲಿ, ಇಂಗ್ಲೀಷ್‌ನ ‘ಸ್ಪೈ’, ‘5 ವೆಡ್ಡಿಂಗ್ಸ್’ ಸಿನಿಮಾಗಳಲ್ಲೂ ನರ್ಗಿಸ್ ಮಿಂಚಿದ್ದಾರೆ. ಹಿಂದಿಯ ‘ರಾಕ್‌ಸ್ಟಾರ್’, ‘ಮದ್ರಾಸ್ ಕೆಫೆ, ‘ಹೌಸ್‌ಫುಲ್’ ಸರಣಿ ಸೇರಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ 46 ವರ್ಷದ ನರ್ಗಿಸ್ ಫಖ್ರಿ ಇದೀಗ ಟಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ತೆಲುಗಿನ ತ್ರಿನಾದ ರಾವ್ ನಕ್ಕಿನ ನಿರ್ದೇಶನದ ‘ನೆನು ರೆಡಿ’ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹೊಸ ಪ್ರತಿಭೆ ಹವೀಶ್ ಮತ್ತು ಕಾವ್ಯಾ ಥಾಪರ್ ಮುಖ್ಯ ಭೂಮಿಕೆಯಲ್ಲಿದ್ದು, ನರ್ಗಿಸ್ ಈ ಚಿತ್ರದ ವಿಶೇಷ ಸಾಂಗ್‌ನಲ್ಲಿ ಕುಣಿದು ಕುಪ್ಪಳಿಸಲಿದ್ದಾರೆ. ಚಿತ್ರತಂಡವು ನಟಿಯನ್ನು ಪರಿಚಯಿಸಲು ಪೋಸ್ಟರ್ ರಿಲೀಸ್ ಮಾಡಿದೆ. ಅದರಲ್ಲಿ ನಟಿ ಗ್ಲಾಮರ್ ಲುಕ್‌ನಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನು ನರ್ಗಿಸ್‌ಗೆ ದಕ್ಷಿಣ ಚಿತ್ರರಂಗ ಹೊಸದಲ್ಲ. ಈ ಹಿಂದೆ ತಮಿಳಿನ ‘ಸಾಗಸಂ’ (2016) ಚಿತ್ರದಲ್ಲಿ ವಿಶೇಷ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರ ತೆರೆಕಂಡು 10 ವರ್ಷಗಳ ಬಳಿಕ ನರ್ಗಿಸ್ ಮತ್ತೆ ತೆಲುಗು ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ‘ನೆನು ರೆಡಿ’ ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್‌ಗೆ ಸಿದ್ಧವಾಗಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net