ಚಾಂದವಾಡಿ ಚಿತಾಗಾರದಲ್ಲಿ ರಿಷಿ ಕಪೂರ್​ ಅಂತ್ಯಕ್ರಿಯೆ; ವಿಮಾನ ದೊರೆಯದೆ ಬಾರದ ರಿದ್ಧಿಮಾ ಕಪೂರ್​

rishi kapoor
Published on

ಮುಂಬೈ: ಬಾಲಿವುಡ್​ನ ಹಿರಿಯ ನಟ ರಿಷಿ ಕಪೂರ್​ ಅವರ ಅಂತ್ಯಕ್ರಿಯೆ ಇಲ್ಲಿನ ಚಾಂದವಾಡಿ ಚಿತಾಗಾರದಲ್ಲಿ ಗುರುವಾರ ಸಂಜೆ ನೆರವೇರಿತು. ಪತ್ನಿ ನೀತೂ ಸಿಂಗ್​, ಪುತ್ರ ರಣಬೀರ್​ ಕಪೂರ್​, ಆಲಿಯಾ ಭಟ್​, ಕರೀನಾ ಕಪೂರ್​ ಖಾನ್​, ಸೈಫ್​ ಆಲಿ ಖಾನ್​, ಅಭಿಷೇಕ್​ ಬಚ್ಚನ್​ ಸೇರಿ ಬಾಲಿವುಡ್​ನ ಅನೇಕ ಗಣ್ಯರಲ್ಲದೆ ಕಪೂರ್​ ಕುಟುಂಬದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕ್ಯಾನ್ಸರ್​ ಜತೆ ಎರಡು ವರ್ಷ ಸೆಣಸಾಡಿದ್ದ ರಿಷಿ ಕಪೂರ್​ (67) ಗುರುವಾರ ಬೆಳಗ್ಗೆ ನಿಧನರಾಗಿದ್ದರು.

ಬರಲಾಗದೆ ಪರಿತಪಿಸಿದ ರಿದ್ಧಿಮಾ: ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಾ ಕಪೂರ್​ ಅವರಿಗೆ ವಿಮಾನದಲ್ಲಿ ತೆರಳಲು ವಿಶೇಷ ಅನುಮತಿ ದೊರೆತಿತ್ತು. ಆದರೆ, ಸಮಯಕ್ಕೆ ಸರಿಯಾಗಿ ವಿಮಾನ ವ್ಯವಸ್ಥೆಯಾಗದ ಕಾರಣ ದೆಹಲಿಯಿಂದಲೇ ತಮ್ಮ ತಂದೆಗೆ ಕೊನೆಯ ನಮನ ಸಲ್ಲಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net