ಬಾಲಿವುಡ್​ ನಟ ಗೋವಿಂದ ಐಸಿಯುಗೆ ದಾಖಲು! | Govinda

Bbau - 2025-11-12T071150.291
Published on

ಮುಂಬೈ: ಮಂಗಳವಾರ ತಡರಾತ್ರಿ ಪ್ರಜ್ಞೆ ತಪ್ಪಿದ ಹಿನ್ನೆಲೆ ಬಾಲಿವುಡ್​​ ನಟ ಗೋವಿಂದ(Govinda) ಅವರನ್ನು ಮುಂಬೈನ ಉಪನಗರ ಜುಹುವಿನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

61 ವರ್ಷದ ನಟ ಗೋವಿಂದ ತಡರಾತ್ರಿ ಮನೆಯಲ್ಲಿ ಏಕಾಏಕಿ ಮೂರ್ಛೆ ಹೋಗಿದ್ದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

"ವೈದ್ಯರನ್ನು ಸಂಪರ್ಕಿಸಿದ ನಂತರ ಅಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 1 ಗಂಟೆಗೆ ತುರ್ತು ಘಟಕಕ್ಕೆ ಕರೆದೊಯ್ಯಲಾಯಿತು" ಎಂದು ಬಿಂದಾಲ್ ದೃಢಪಡಿಸಿದ್ದಾರೆ. ಗೋವಿಂದ ಅವರ ಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net