ಕೆರೆಯಲ್ಲಿ ತಲೆಯಿಲ್ಲದ ದೇಹ, ಕೈಕಾಲು ಪತ್ತೆ! ತನಿಖೆ ಚುರುಕು

ವಿಜಯವಾಣಿ - 2023-12-31T162005.993
Published on

ಚೆನ್ನೈ, ತಮಿಳುನಾಡು: ಕುಡಿಯುವ ನೀರಿಗೆ ಬಳಕೆ ಮಾಡುತ್ತಿದ್ದ ಸರೋವರದಲ್ಲಿ ತಲೆ ಮತ್ತು ಕೈಕಾಲುಗಳಿಲ್ಲದ ಶವ ಪತ್ತೆಯಾಗಿದ್ದು, ಇದೀಗ ಭಾರೀ ಅನುಮಾನಕ್ಕೆ ಕಾರಣವಾಗಿದೆ. ಚೆಂಬರಂಬಕ್ಕಂ ಸರೋವರದಲ್ಲಿ ಮೃತದೇಹ ಕಂಡುಬಂದಿದ್ದು, ಇದನ್ನು ಮೊದಲು ಸ್ಥಳಕ್ಕೆ ಬಂದ ಮೀನುಗಾರರ ಗುಂಪು ನೋಡಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ.

ಘಟನೆ ಕುರಿತು ಮಾಹಿತಿ ಪಡೆದ ಚೆನ್ನೈ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದೆ. ತಲೆಯಿಲ್ಲದ ದೇಹದ ಸುತ್ತಮುತ್ತ ಹುಡುಕಾಡಿದ ವೇಳೆ ಕತ್ತರಿಸಿದ ಕಾಲು ಪತ್ತೆಯಾಗಿದೆ. ಮೃತ ವ್ಯಕ್ತಿ ಸುಮಾರು 30 ವರ್ಷ ವಯಸ್ಸಿನವನಾಗಿದ್ದು, ಹೊಟ್ಟೆಯಲ್ಲಿ ಇರಿತದ ಗಾಯವಿದೆ ಎಂದು ತನಿಖೆಯ ಪರಿಚಿತ ಮೂಲಗಳು ಬಹಿರಂಗಪಡಿಸಿವೆ.

ಮೃತದೇಹವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಬಂಡೆಗೆ ಕಟ್ಟಿ ಕೆರೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಪ್ರಕರಣ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net