ಕಟ್ಟಡ ಗುತ್ತಿಗೆದಾರನ ಶವ ಪತ್ತೆ

BBMP Demolition
Published on

ಬೆಂಗಳೂರು: ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆ ಗುತ್ತಿಗೆದಾರ ಏಳುಮಲೈ ಶವವನ್ನು ಹೊರ ತೆಗೆಯಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡವರಿಗಾಗಿ 4 ದಿನಗಳಿಂದಲೂ 30ಕ್ಕೂ ಹೆಚ್ಚು ಅಗ್ನಿ ಶಾಮಕ ದಳ, ಎನ್‌ಡಿಆರ್‌ಎ್ ಅಧಿಕಾರಿ, ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಗುರುವಾರ ರಾತ್ರಿ 8 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಸ್ಥಗಿಗೊಳಿಸಿ ಶುಕ್ರವಾರ ಮುಂಜಾನೆಯಿಂದ ಮತ್ತೆ ಶೋಧ ಕಾರ್ಯ ಆರಂಭಿಸಿದಾಗ ಬೆಳಗ್ಗೆ ಗುತ್ತಿಗೆದಾರ ಏಳುಮಲೈ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯದಲ್ಲಿ 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಏಳುಮಲೈ ಅವರ ಮೊಬೈಲ್ ರಿಂಗ್ ಆಗುತ್ತಿತ್ತು. ಇದೇ ಲೊಕೇಶನ್ ಸಹ ಇದೇ ಸ್ಥಳ ತೋರಿಸುತ್ತಿದ್ದುದ್ದರಿಂದ ಕಾರ್ಯಾಚರಣೆ ಮುಂದುವರೆಸಿದಾಗ ಶವ ಪತ್ತೆಯಾಗಿದೆ. ಅವಶೇಷಗಳಡಿ ಮತ್ತೆ ಯಾರು ಇಲ್ಲವೆಂದು ಕಾರ್ಮಿಕರು ಖಚಿತ ಪಡಿಸಿದ್ದಾರೆ. ಅವಶೇಷಗಳನ್ನು ತೆರವು ಮಾಡುವವರೆಗೂ ಜೆಸಿಬಿ ಯಂತ್ರಗಳ ಸಹಾಯದಿಂದ ಕಾರ್ಯಾಚರಣೆ ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net