ಪಾಳುಬಿದ್ದ ಮನೆಯಲ್ಲಿ ಶವ ಪತ್ತೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಶವ ಸಂಪೂರ್ಣವಾಗಿ ಕೊಳೆತು ದುರ್ನಾಥ
  • ವಾಲ್ಪಾಡಿ ಗ್ರಾಪಂ ವ್ಯಾಪ್ತಿಯ ಮಾಡದಂಗಡಿಯಲ್ಲಿ ಘಟನೆ
ಮೂಡುಬಿದಿರೆ: ವಾಲ್ಪಾಡಿ ಗ್ರಾಪಂ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವ್ಯಕ್ತಿ ಮೃತಪಟ್ಟು ಮೂರ್ನಾಲ್ಕು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದ್ದು, ಶವ ಸಂಪೂರ್ಣವಾಗಿ ಕೊಳೆತು ದುರ್ನಾಥ ಬೀರುತ್ತಿತ್ತು. ನೆರೆ ಮನೆಯವರೊಬ್ಬರ ನಾಯಿ ಕಾಣೆಯಾಗಿದ್ದು, ಅದೇ ನಾಯಿ ಸತ್ತು ದುರ್ನಾಥ ಬರುತ್ತಿರಬಹುದೆಂದು ಸುತ್ತಮುತ್ತ ಹುಡುಕಾಡುತ್ತಾ ಹೋದಾಗ ಮಾನವ ಶವ ಇರುವುದು ಬೆಳಕಿಗೆ ಬಂದಿದೆ. ಕೇರಳ ಮೂಲದ ಚೇಟ ಎಂಬ ವ್ಯಕ್ತಿ ಇದೇ ಪರಿಸರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಈತ ಸಂಜೆ ವೇಳೆ ಮದ್ಯಪಾನ ಮಾಡಿ ಅಲ್ಲಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಪತ್ತೆಯಾದ ಶವ ಆತನದ್ದೇ ಇರಬಹುದು ಎಂದು ಶಂಕಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net