

ಮಾಸ್ಕೋ: ರಷ್ಯಾದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡೂಪ್(ಬಾಡಿ ಡಬಲ್ಸ್) ಬಳಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಊಹಾಪೋಹಗಳನ್ನು ಕ್ರೆಮ್ಲಿನ್(ಅಧ್ಯಕ್ಷ ಭವನವಿರುವ ಸ್ಥಳ) ತಳ್ಳಿಹಾಕಿದೆ.
ಕ್ರೆಮ್ಲಿನ್ ಅಧ್ಯಕ್ಷರ ವಕ್ತಾರ ಡಿಮಿತ್ರಿಪೆಸ್ಕೋವ್ ಇತಹ ವಾದಗಳನ್ನು "ರಂಜನೀಯ"ಕ್ಕಾಗಿ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಶನಿವಾರ ಮಾಸ್ಕೋದಲ್ಲಿ ಪ್ರಾರಂಭವಾದ ರಷ್ಯಾ ಪ್ರದರ್ಶನದಲ್ಲಿ ಮಾತನಾಡಿದ ಪೆಸ್ಕೋವ್ "ನಮ್ಮಲ್ಲಿ ಒಬ್ಬ ಪುಟಿನ್ ಮಾತ್ರ ಇದ್ದಾರೆ. ಬಾಡಿ ಡಬಲ್ಸ್ ಎಂದು ಬರುತ್ತಿರುವ ಅನಿಸಿಕೆಗಳು ಹಾಸ್ಯಾಸ್ಪದವಾಗಿವೆ" ಎಂದು ಊಹಾಪೋಹಗಳಿಗೆ ತೆರೆ ಎಳೆದರು.
ವಿವಿಧ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ರಷ್ಯಾದ ಅಧ್ಯಕ್ಷರ ದೇಹವು ಡಬಲ್ಸ್ ಎಂದು ಹೇಳಲಾದ ವದಂತಿಗಳನ್ನು ಅಂತರ್ಜಾಲದಲ್ಲಿ ನಿಪುಣರು ಎನಿಸಿಕೊಂಡವರು ಹಬ್ಬಿಸುತ್ತಿದ್ದಾರೆ. ಕೆಲವರು ಪುಟಿನ್ ರೂಪಗಳನ್ನು ಲೆಕ್ಕಕ್ಕೆ ಮೀರಿ ಸೃಷ್ಟಿಸುತ್ತಿದ್ದಾರೆ ಎಂದರು.
ರಷ್ಯಾ ಅಧ್ಯಕ್ಷರ ಬಾಡಿ ಡಬಲ್ಸ್ನ್ನು ಕೆಲವು ವಿದೇಶ ಪ್ರವಾಸ, ಬಹಿರಂಗ ಕಾರ್ಯಕ್ರಮಗಳಿಗೂ ಬಳಸಲಾಗಿತ್ತು ಎಂದು ವಾರಪತ್ರಿಕೆಯೊಂದು ವರದಿ ಮಾಡಿತ್ತು. ಅದೇ ರೀತಿ ಜಪಾನ್ನ ಟಿವಿ ಸಹ ಇದೇ ವಿಯವನ್ನು ಪ್ರಸ್ತಾಪಿಸಿತ್ತು. ಉಕ್ರೇನ್ ಸೇನಾ ಇಂಟಿಲಿಜೆನ್ಸ್ ಮುಖ್ಯಸ್ಥ ಕಿರಿಲ್ ಬುಡನೋವ್ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು.
ಪುಟಿನ್ 'ಲುಕ್-ಅಲೈಕ್' ಬಂದ ಹಲವು ಅಭಿಪ್ರಾಯಗಳು ಅನಗತ್ಯವಾದವು. ನಮ್ಮ ನಾಯಕ "ಕೆಲಸ ಮಾಡಲು ಅದ್ಭುತ ಫಿಟ್‌ನೆಸ್" ಹೊಂದಿದ್ದಾರೆ ಮತ್ತು ನಾನ್ಸ್ಟಾಪ್ ಆಗಿ ಸಹ ಹಲವು ದಿನಗಳವರೆಗೆ ಒಂದೇ ಸಮನೆ ಕೆಲಸ ಮಾಡಬಲ್ಲರು ಎಂದು ಡಿಮಿತ್ರಿಪೆಸ್ಕೋವ್ ಹೇಳಿದ್ದಾರೆ.