ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಶ್ರೇಣಿಯ ಪರ್ವತದಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಇಬ್ಬರು ಸೈನಿಕರ ಮೃತದೇಹ ಪತ್ತೆ| Soldiers

ವಿಜಯವಾಣಿ (29)
Published on

Soldiers: ಜಮ್ಮು-ಕಾಶ್ಮೀರದ ಕಿಶ್ತ್ವಾರದ ಶ್ರೇಣಿಯ ಪರ್ವತ ಪ್ರದೇಶದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಭಾರೀ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಸೈನಿಕರು, ಐದು ದಿನಗಳ ನಿರಂತರ ಶೋಧದ ಬಳಿಕ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಶನಿವಾರ (ಅ. 11) ಸೇನೆ ತಿಳಿಸಿದೆ.

ಅಕ್ಟೋಬರ್ 6 ಮತ್ತು 7ರ ಮಧ್ಯರಾತ್ರಿ ಈ ಘಟನೆ ಸಂಭವಿಸಿತ್ತು. ಭಾರೀ ಹಿಮಪಾತ ಮತ್ತು ದಟ್ಟವಾದ ಅರಣ್ಯ ಪ್ರದೇಶದಿಂದಾಗಿ ಲ್ಯಾನ್ಸ್ ಹವಾಲ್ದಾರ್ ಪಲಾಶ್ ಘೋಷ್ ಮತ್ತು ಲ್ಯಾನ್ಸ್ ನಾಯಕ್ ಸುಜಯ್ ಘೋಯ್ ನಾಪತ್ತೆಯಾಗಿದ್ದರು. ಭಾರೀ ಹಿಮಪಾತದಿಂದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಶುಕ್ರವಾರ ಕೊಕೆರ್ನಾಗ್‌ನ ಗಡೋಲಿ ಅರಣ್ಯ ಪ್ರದೇಶದಲ್ಲಿ ಅಂತಿಮವಾಗಿ ಒಬ್ಬ ಸೈನಿಕನ ಮೃತದೇಹ ಪತ್ತೆಯಾಗಿದ್ದರೆ, ಶನಿವಾರ ಅದೇ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಚಿನಾರ್ ಕಾರ್ಪ್ಸ್‌, ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪ್ಯಾರಾಟ್ರೂಪರ್‌ಗಳ ಸಮರ್ಪಣೆ ಮತ್ತು ಶೌರ್ಯ ಅಸಾಧಾರಣವಾಗಿದ್ದು, ಅವರ ಶೌರ್ಯ ಸ್ಫೂರ್ತಿಯಿಂದ ಕೂಡಿದೆ ಎಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net