ಈ ಆನೆಯ ವಿಶಿಷ್ಟ ಹೇರ್​ಸ್ಟೈಲ್​ಗೆ ಇದ್ದಾರೆ ಲಕ್ಷಾಂತರ ಫ್ಯಾನ್ಸ್​; ಇಲ್ಲಿದೆ ನೋಡಿ ಬಾಬ್​ಕಟ್​ ಸೆಂಗಮಲಂ ಕುರಿತಾದ ವಿಶೇಷ ವರದಿ

Sengamalam
Published on

ಚೆನ್ನೈ: ಚೀನಾದ ಪ್ರಸಿದ್ಧ ಧಾರ್ಮಿಕ ಸ್ಥಳವೊಂದರಲ್ಲಿ ಬೆಕ್ಕೊಂದು ಭಕ್ತಾಧಿಗಳಿಹೆ ಹೈಫೈ ನೀಡಿ ಸುದ್ದಿಯಾಗುತ್ತಿರುವ ನಡುವೆಯೇ ತಮಿಳುನಾಡಿನ ದೇವಸ್ಥಾನವೊಂದರ ಆನೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಮನ್ನಾರ್‌ಗುಡಿಯ ಶ್ರೀ ವಿದ್ಯಾ ರಾಜಗೋಪಾಲಸ್ವಾಮಿ ದೇವಸ್ಥಾನದ ಸೆಂಗಮಲಂ ಆನೆಯು ತನ್ನ ವಿಭಿನ್ನ ಕೇಶವಿನ್ಯಾಸದ ಮೂಲಕ ಸದ್ದು ಮಾಡುತ್ತಿದ್ದು, ಸದ್ಯ ಈ ಆನೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್​ಅನ್ನು ಸೃಷ್ಟಿಸಿದೆ. 

ಈ ಆನೆ ಹೆಸರು ಬಾಬ್‌ ಕಟ್‌ (Bob Cut) ಸೆಂಗಮಲಂ. ಮನ್ನಾರ್​ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಈ ಆನೆಯ ಬಾಬ್ ಕಟ್ ಹೇರ್‌ ಸ್ಟೈಲ್ʼಗೆ ದೇಶಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ. ಬಾಬ್-ಕಟ್ ಸೆಂಗಮಲಂ ಎಂದು ಕರೆಯಲ್ಪಡುವ ಈ ಆನೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿದೆ.

2003 ರಲ್ಲಿ ಕೇರಳದಿಂದ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಸೆಂಗಮಲಂ ಆನೆಯನ್ನು ಕರೆತರಲಾಯಿತು. ಇನ್ನು ಈ ಆನೆಯ ಹೇರ್‌ ಸ್ಟೈಲ್‌ ನೋಡಿಕೊಳ್ಳುವುದು ಮಾವುತ ರಾಜಗೋಪಾಲ್. ಆನೆಗೆ ಈ ವಿಭಿನ್ನ ಹೇರ್​ಸ್ಟೈಲ್ ಮಾಡಿಸುವುದರ ಬಗ್ಗೆ ಬಂದ ಆಲೋಚನೆ ಕುರಿತು ಮಾವುತ ಮಾತನಾಡಿದ್ದು, ಆನೆ ಹಾಗೂ ತಮ್ಮ ನಡುವಿನ ಒಡನಾಟವನ್ನು ನೆನೆದಿದ್ದಾರೆ.

ಸೆಂಗಮಲಂನೊಂದಿಗೆ ಕಾಲ ಕಳೆಯುವುದನ್ನು ನಾನು ಆನಂದಿಸುತ್ತೇನೆ.ಸೆಂಗಮಲಂ ನನ್ನ ಮಗುವಿನಂತೆ. ಆಕೆ ಇತರ ಆನೆಗಳಿಗಿಂತ ವಿಶೇಷವಾಗಿ ಕಾಣಬೇಕೆಂಬುದು ನನ್ನ ಆಸೆ. ಒಂದೊಮ್ಮೆ ನಾನು ಇಂಟರ್ನೆರ್ಟ್​ನಲ್ಲಿ ವಿಡಿಯೋ ನೋಡುವಾಗ ಬಾಬ್‌ ಕಟ್‌ (Bob Cut) ಮಾಡಿರುವ ಆನೆಯನ್ನು ನೋಡಿದೆ. ಅದಾದ ನಂತರ ಸೆಂಗಮಲಂಗೆ ಕೂಡ ಕೂದಲು ಬೆಳೆಸಿ, ಆ ರೀತಿ ಹೇರ್‌ ಕಟ್‌ ಮಾಡಿಸಿದೆ. ಈ ಹೇರ್​ಸ್ಟೈಲ್​ಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಮಾವುತ ರಾಜಗೋಪಾಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net