ಹೊನ್ನಾವರ ಸಮೀಪ ಅರಬ್ಬಿಸಮುದ್ರದಲ್ಲಿ ಬೋಟ್ ಮುಳುಗಡೆ: 15 ಮೀನುಗಾರರ ರಕ್ಷಣೆ
Published on:
Copied
Follow Us
ಉತ್ತರಕನ್ನಡ: ಹೊನ್ನಾವರ ಸಮೀಪದ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ 15 ಮೀನುಗಾರರನ್ನು ರಕ್ಷಿಸಲಾಗಿದೆ.
ಹೊನ್ನಾವರ ದಡದಿಂದ 40 ನಾಟಿಕಲ್ ಮೈಲು ದೂರದಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ದುರ್ಗಾ ಭೈರವಿ ಹೆಸರಿನ ಬೋಟ್ ಮುಳುಗಡೆ ಆಗಿದೆ.
ಆಳ ಸಮುದ್ರದಲ್ಲಿ ಬಾರೀ ಗಾಳಿ ಮತ್ತು ಅಲೆ ಹೆಚ್ಚಾಗಿದ್ದರಿಂದ ಬೋಟ್ ಮುಳುಗಿದೆ. ಮುಳುಗುತ್ತಿದ್ದ ಬೋಟ್ನಲ್ಲಿದ್ದ ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್ನಲ್ಲಿದ್ದವರು ರಕ್ಷಿಸಿದ್ದಾರೆ.