ಬಿಎನ್‌ಎಂಐಟಿನ ಕಾಲೇಜಿನಲ್ಲಿ ರಕ್ತದಾನ ಶಿಬಿರ.

Published on

ಬೆಂಗಳೂರು:

ಬನಶಂಕರಿಯಲ್ಲಿರುವ ಬಿಎನ್‌ಎಂಐಟಿನಲ್ಲಿ ಕಾಲೇಜಿನ ಸಂಸ್ಥಾಪಕರಾದ ಮಾತೃಶ್ರೀ ಸುಶೀಲಾ ದೇವಿ

ಆರ್.ಮಾನೆ ಅವರ ಹುಟ್ಟುಹಬ್ಬದ ನೆನಪಿನಾರ್ಥ ಕಾಲೇಜಿನ ಆವರಣದಲ್ಲಿ ಜಯದೇವ ಆಸ್ಪತ್ರೆ ಮತ್ತು ಲಯನ್ಸ್, ರಾಷ್ಟ್ರೋತ್ಥಾನ ರಕ್ತ ನಿಧಿ ಸೇರಿದಂತೆ ಹಲವು ರಕ್ತ ನಿಧಿ ಸಂಸ್ಥೆಗಳು ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಿಸಲಾಗಿತ್ತು.

ಬಿಎನ್‌ಎಂಐಟಿ ಚಾರಿಟಿ ಅಧ್ಯಕ್ಷ, ನಾರಾಯಣ ರಾವ್ ಆರ್.ಮಾನೆ ಚಾಲನೆ ನೀಡಿ ಮಾತನಾಡಿ, ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಬೋಧಿಸುವುದು ಮಾತ್ರವಲ್ಲ. ಜತೆಗೆ

ಸಮಾಜ ಕಾರ್ಯಗಳನ್ನು ಸಹ ಮಾಡಲಿದೆ. ಈ ಹಿನ್ನೆಲೆಯಲ್ಲಿ ನಾವು ಈ ರಕ್ತದಾನ ಶಿಬಿರ ಅಯೋಜಿಸಿದ್ದೇವೆ ಎಂದರು.

ಇಂದು ಸೂಕ್ತ ಸಮಯಕ್ಕೆ ಅವಶ್ಯ ರಕ್ತ ಸಿಗದೇ ಹಲವಾರು ಮೃತರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಾವು ಈ ಶಿಬಿರ ಆಯೋಜಿಸಿದ್ದೇವೆ. ಇಲ್ಲಿ ಸಾಕಷ್ಟು ರಕ್ತ ಸಂಗ್ರಹವಾಗುವುದರಿಂದ ಇದು ರೋಗಿಗಳಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅವಶ್ಯಕ ರೋಗಿಗಳಿಗೆ ನೇರವಾಗಿ ರಕ್ತದಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದರು.

ಬಿಎನ್‌ಎಂ ಚಾರಿಟಿ ಟ್ರಸ್ಟಿ ಜಂಟಿ ಕಾರ್ಯದರ್ಶಿ ಅಶೋಕ್ ಆರ್.ಮಾನೆ ಮಾತನಾಡಿ, ನಮ್ಮ ತಾಯಿಯನ್ನು ಕಳೆದುಕೊಂಡು 8 ವರ್ಷಗಳಾಯಿತು. ಅವರು ಬದುಕಿದ್ದಾಗ ಸಾರ್ವಜನಿಕರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದರು. ಅವರ ಮಾರ್ಗದಲ್ಲಿ ನಾವು ಹೆಜ್ಜೆ ಹಾಕುವ ಮೂಲಕ ಅವರ ಸಮಾಜ ಕಾರ್ಯವನ್ನು ಮುಂದುವರಿಸುತ್ತಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿಎನ್‌ಎಂ ಚಾರಿಟಿ ಟ್ರಸ್ಟಿಗಳಾದ ಈಶ್ವರ್ ಎನ್.ಮಾನೆ, ಕಾಲೇಜಿನ

ಹೆಚ್ಚುವರಿ ನಿರ್ದೇಶಕರು ಮತ್ತು ಪ್ರಾಂಶುಪಾಲರು, ಡಾ. ಎಸ್.ವೈ. ಕುಲಕರ್ಣಿ, ನಿರ್ದೇಶಕ ಪ್ರೊ. ಟಿ.ಜೆ.ರಾಮಮೂರ್ತಿ, ಉಪ ನಿರ್ದೇಶಕ ಡಾ. ಜಿ.ಎನ್.ಕೃಷ್ಣಮೂರ್ತಿ ಇತರರಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇತರೆ ವಿದ್ಯಾರ್ಥಿಗಳು ಆಗಮಿಸಿ ಉತ್ಸುಕತೆಯಿಂದ ಭಾಗವಹಿಸಿ ರಕ್ತ ದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net