

ಬೆಂಗಳೂರು: ದೇಶಾದ್ಯಂತ ಎರಡು ಸಾವಿರ ರೂಪಾಯಿ ನೋಟ್ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2000 ರೂ. ನೋಟುಗಳನ್ನು ಇನ್ನು ಯಾವುದೇ ವ್ಯವಹಾರಗಳಲ್ಲಿ ಬಳಸುವಂತಿಲ್ವಾ? ಬಸ್‌ಗಳಲ್ಲಿ ತೆಗೆದುಕೊಳ್ಳುತ್ತಾರಾ? ಎಂದು ಗೊಂದಲುಗಳು ಮೂಡಿವೆ. ಹೀಗಾಗಿ ಬಿಎಂಟಿಸಿ ಒಂದು ಪ್ರಕಟಣೆಯನ್ನು ಹೊರಡಿಸಿದೆ.
ಬಿಎಂಟಿಸಿ ಕೇಂದ್ರ ಕಛೇರಿಯಿಂದ ಬಸ್ಸಿನಲ್ಲಿ ನಿರ್ವಾಹಕರು ರೂ. 2000 ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿರುವುದಿಲ್ಲ. ಹೊಸ ಕೋಟೆ ಘಟಕದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿದ್ದು, ತದನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿಸಿ ಬಸ್ಸುಗಳಲ್ಲಿ ರೂ 2000 ನೋಟುಗಳನ್ನು ಸ್ವೀಕರಿಸಲಾಗುತ್ತದೆ.
ಪ್ರಕಟಣೆಯಲ್ಲಿ ಏನಿದೆ?:
ಬಿಎಂಟಿಸಿ ಕೇಂದ್ರ ಕಚೇರಿ ಸಿಬ್ಬಂದಿಗೆ ರೂ. ತೆಗೆದುಕೊಳ್ಳದಂತೆ ಯಾವುದೇ ಆದೇಶ ನೀಡಿಲ್ಲ. 2000 ನೋಟುಗಳನ್ನು ಬಸ್‌ಗಳಲ್ಲಿ ನಾವು ಸ್ವೀಕರಿಸುತ್ತಿದ್ದೇವೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ತಿಳಿಸಲಾಗಿದೆ.
ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಈ ವರ್ಷ ಸೆಪ್ಟೆಂಬರ್ 30ವರೆಗೂ ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಲಾಗಿದೆ. ಮೇ 23 ರಿಂದ ಸಮೀಪದ ಬ್ಯಾಂಕ್‌ಗಳಿಗೆ ತೆರಳಿ ಸಾರ್ವಜನಿಕರು ನೋಟು ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್‌ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್ 1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಹೀಗಾಗಿ, ಸೆ.30ರ ಒಳಗೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು " ಎಂದು ಸೂಚನೆ ನೀಡಿದೆ.