ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್​!

ವಿಜಯವಾಣಿ - 2024-07-09T102534.220
Published on

ಬೆಂಗಳೂರು: ಇಂದು ಬೆಳಗ್ಗೆ 8:50ರ ಸಮಾರಿಗೆ ನಗರದ ಎಂ.ಜಿ ರೋಡ್​ನ ಅನಿಲ್​ ಕುಂಬ್ಳೆ ಸರ್ಕಲ್​ ಬಳಿ 144ಈ ಮಾರ್ಗದ ಬಿಎಂಟಿಸಿ ಬಸ್​ವೊಂದು ದಿಢೀರ್​ ಅಗ್ನಿಗೆ ಆಹುತಿಯಾಗಿದೆ.

ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲಾ ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಚಾಲಕ ಮತ್ತು ನಿರ್ವಾಹಕ, ತಕ್ಷಣವೇ ಸ್ಥಳದಿಂದ ದೂರ ಓಡಿದ್ದಾರೆ. ಕ್ಷಣಮಾತ್ರದಲ್ಲಿ ಬಸ್​ ಧಗಧಗನೆ ಹೊತ್ತಿ ಉರಿದ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಂಜಿನ್​ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಬಸ್​ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಚಾಲಕ, ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ಸ್ಥಳಕ್ಕೆ ತಕ್ಷಣವೇ ಬರುವಂತೆ ಒತ್ತಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ಬೆಂಕಿ ನಂದಿಸಲು ನಿರ್ವಾಹಕ ಪಟ್ಟ ಪ್ರಯತ್ನ ವಿಫಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net