ಬೆಂಗಳೂರು:
ಬಿ.ಎಂ.ಎಸ್ ತಾಂತ್ರಿಕ ಮಹಾವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ 1,214 ವಿದ್ಯಾರ್ಥಿಗಳಿಗೆ ಬಿ.ಇ., ಇಂಜಿನಿಯರಿಂಗ್ ಪದವಿ ಪ್ರಧಾನ ಮಾಡಲಾಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಡಿಯಲ್ಲಿರುವ ಸಂಯೋಜಿತ ಸ್ವಾಯತ್ತ ಸಂಸ್ಥೆಯಾದ ಬಿ.ಎಂ.ಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ದಯಾನಂದ ಪೈ ಅವರು ವಹಿಸಿದ್ದರು. ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಎಸ್‌ಟಿ) ಕುಲಪತಿಗಳಾದ ಪದ್ಮಭೂಷಣ ಡಾ. ಬಿ.ಎನ್.ಸುರೇಶ್ ಮುಖ್ಯ ಅತಿಥಿಗಳಾಗಿ, ಅತಿಥಿಗಳಾಗಿ ದತ್ತಿಗಳಾದ ಅವಿರಾಮ್ ಶರ್ಮಾ, ಬಿ ಎಂ ಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಭೀಮ್ ಶಾ ಆರ್ಯ, ಉಪಪ್ರಾಂಶುಪಾಲರು (ಆಡಳಿತ ) ಡಾ. ಶೇಷಾಚಲಂ.ಡಿ., ಉಪಪ್ರಾಂಶುಪಾಲರು (ಶೈಕ್ಷಣಿಕ ) ಡಾ. ಎಲ್. ರವಿಕುಮಾರ್ ಮತ್ತು ಪರೀಕ್ಷಾ ಕೇಂದ್ರದ ನಿರ್ದೇಶಕರಾದ ಡಾ. ಬಿ. ರವಿಶಂಕರ್, ವಿಂಗ್ ಕಮಾಂಡರ್ ಆರ್.ಎ. ರಾಘವನ್, ಬಿ.ಎಂ.ಎಸ್. ಶಿಕ್ಷಣ ಸಂಸ್ಥೆಯ ನಿರ್ದೇಶಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.