

ಪ್ರಕೃತಿ ಸೋಜುಗಗಳ ಮಡಿಲು ಎಂಬುದರಲ್ಲಿ ಮಾತಿಲ್ಲ. ಒಂದಲ್ಲ ಒಂದು ಸೌಂದರ್ಯವನ್ನು ತೋರುತ್ತಲೇ ಇರುತ್ತದೆ.
ಇದೀಗ 12 ಸೆಕೆಂಡ್ಗಳ ಹೂವು-ಹಾವಿನ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗಿದೆ. ಲೈಫ್ ಆಫ್ ಅರ್ತ್ ಎಂಬ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಆದ ವಿಡಿಯೋ ನೋಡಿದರೆ ನೀವೂ ಕೂಡ ವಾವ್ ಅನ್ನದೆ ಇರಲಾರಿರಿ.
ಹೂವುಗಳ ಮೇಲೆ ದುಂಬಿ, ಚಿಟ್ಟೆಗಳು ಬಂದು ಕುಳಿತುಕೊಳ್ಳುವುದು ತೀರ ಸಾಮಾನ್ಯ. ಆದರೆ ಇಲ್ಲಿ ಕೆಂಪು ಹೂವನ್ನು, ನೀಲಿ ಬಣ್ಣದ ವೈಪರ್ ಹಾವು ಸುತ್ತಿಕೊಂಡಿದೆ. ಅದೆಷ್ಟು ಚೆಂದವಾಗಿ ಹೂವನ್ನು ಸುತ್ತಿದೆಯೆಂದರೆ ನಿಜಕ್ಕೂ ಒಂದು ವಿಸ್ಮಯವೇ ಸರಿ. ಕೆಂಪು ಹೂವಿನ ಮೇಲೆ ನೀಲಿ ಹಾವನ್ನು ನೋಡಿ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ದೇಶದ್ರೋಹಿ ಫ್ರೀಲ್ಯಾನ್ಸ್ ಪತ್ರಕರ್ತನ ಬಂಧನ, ಚೀನಾ ಜತೆ ರಹಸ್ಯ ಹಂಚಿಕೊಂಡ ಆತ ಯಾರು?
ದೂರದಿಂದಲೇ ನೋಡಿ..ಆದರೆ ಮುಟ್ಟ ಬೇಡಿ ಎಂದು ಕೆಲವರು ಕಾಮೆಂಟ್ ಬರೆದಿದ್ದಾರೆ. ನೀಲಿ ಹಾವು ನೋಡಲು ಚೆಂದ ಕಾಣಬಹುದು..ಅದರಲ್ಲೂ ಹೂವಿನ ಮೇಲೆ ಕುಳಿತಿದ್ದರಿಂದ ಅಲ್ಲಿ ಸೌಂದರ್ಯ ಹೆಚ್ಚಾಗಿರಬಹುದು. ಆದರೆ ವೈಪರ್ ಹಾವು ತುಂಬ ಅಪಾಯಕಾರಿ, ಮೈಮೇಲೆ ಹಾರಬಹುದು ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.