ಅರೆರೇ..ಇದು ನೀಲಿ ಹಾವು! ಅಪರೂಪದ ಬುಸ್​ ಬುಸ್​ ನಾಗಪ್ಪನ ನೀವು ನೋಡಿದ್ದೀರಾ?

blue color viper snake trending viral video
Published on

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗಿವೆ. ಪ್ರಾಣಿಗಳು ಮತ್ತು ಹಾವುಗಳಿಗೆ ಸಂಬಂಧಿಸಿದ ವೀಡಿಯೊಗಳೂ ಇವೆ.  ಇತ್ತೀಚೆಗೆ ನಾವು ಕೆಂಪು ಬಣ್ಣದ ರಾಜಕೋಬ್ರಾದ ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿದ್ದೇವೆ. ಇತ್ತೀಚೆಗೆ ಮತ್ತೊಂದು ಬಣ್ಣದ ಅಪರೂಪದ ಹಾವು ಕಾಣಿಸಿಕೊಂಡಿತ್ತು.

ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ನಾಲ್ಕು ಬೇಬಿ ಫಿಟ್ ವೈಪರ್‌ಗಳೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಹಾವುಗಳಾದರೂ ನೋಡಲು ಬಹಳ ಸುಂದರವಾಗಿರುವ ನೀಲಿ ಬಣ್ಣದಲ್ಲಿ ಕಾಣಸಿಗುವುದು ಅಪರೂಪ. ವೀಡಿಯೊದಲ್ಲಿರುವ ವ್ಯಕ್ತಿ ಅವುಗಳನ್ನು ತೋರಿಸುತ್ತಿದ್ದಾನೆ ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ವಿವರಿಸುತ್ತಿದ್ದಾನೆ.

ವಾಸ್ತವವಾಗಿ, ಈ ಹಾವುಗಳು ಬಹಳ ಅಪರೂಪ. ಅಂತಹ ಅನೇಕ ಅಪರೂಪದ ಹಾವುಗಳು ಮತ್ತು ಪ್ರಾಣಿಗಳನ್ನು ಸಂರಕ್ಷಣಾ ಪ್ರಯೋಗಾಲಯಗಳಲ್ಲಿ ಉಳಿಸಲಾಗಿದೆ ಮತ್ತು ಬೆಳೆಸಲಾಗುತ್ತದೆ. ಇದಲ್ಲದೆ, ಕೆಲವು ದೇಶಗಳಲ್ಲಿ, ಈ ನೀಲಿ ವೈಪರ್‌ಗಳನ್ನು ಬೆಳೆಸಲು ಸರ್ಕಾರಗಳು ಸ್ವತಃ ಅನುಮತಿ ನೀಡುತ್ತವೆ ಎಂದು ವರದಿಯಾಗಿದೆ.

ಈ ವೈರಲ್ ವೀಡಿಯೊ ಕಿರುಚಿತ್ರವನ್ನು ಸ್ಟೋನ್ಸ್ ವರ್ಲ್ಡ್ ಎಂಬ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ವೀಡಿಯೊವನ್ನು ಕೆಲವು ಲಕ್ಷ ಜನರು ವೀಕ್ಷಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net