ರಕ್ತದಾನಿಗಳಾಗೋಣ: ರಕ್ತ ಸಂಗ್ರಹ ಶೇ. 60 ಕುಸಿತ, ಕೋವಿಡ್​ 2ನೇ ಅಲೆ ತೀವ್ರತೆ

Blood
Published on

ಬೆಂಗಳೂರು: ಕೋವಿಡ್​ ಎರಡನೇ ಅಲೆಯ ತೀವ್ರತೆಯಿಂದಾಗಿ ಜನರು ಸ್ವಯಂಪ್ರೇರಿತರಾಗಿ ರಕ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ರಕ್ತದಾನ ಶಿಬಿರಗಳು ಸ್ಥಗಿತವಾಗಿದ್ದು, ರಾಜ್ಯದಲ್ಲಿ ರಕ್ತ ಸಂಗ್ರಹ ಪ್ರಮಾಣ ಶೇ. 60ರಷ್ಟು ಕುಸಿದಿದೆ. ರಕ್ತನಿಧಿಗಳಲ್ಲಿ ರಕ್ತದ ತೀವ್ರ ಅಭಾವ ಉಂಟಾಗಿದೆ. ಇದರಿಂದಾಗಿ ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಶೇ.70 ವ್ಯತ್ಯಾಸ ಉಂಟಾಗಿದೆ. ಕೋವಿಡ್​ ಮೊದಲ ಅಲೆಯಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು.

| ಕೆ.ಎಂ. ಪಂಕಜ 

ಶಿಬಿರಗಳಿಲ್ಲದೆ ರಕ್ತದ ಕೊರತೆ: ಸಾಮಾನ್ಯವಾಗಿ ರಕ್ತದಾನ ಶಿಬಿರಗಳನ್ನು ಶಾಲಾಕಾಲೇಜುಗಳು, ಐಟಿಬಿಟಿ ಕಂಪನಿಗಳು, ಗಣ್ಯರ ಜನ್ಮದಿನದ ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯೋಜಿಸಲಾಗುತ್ತದೆ. ಕೋವಿಡ್​ ನಿಂದಾಗಿ ಶಾಲಾ ಕಾಲೇಜುಗಳು ನಡೆಯುತ್ತಿಲ್ಲ, ಐಟಿಬಿಟಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್​ ್ರಂ ಹೋಂ ನೀಡಿರುವುದರಿಂದ ಈ ವರ್ಗದ ದಾನಿಗಳಿಂದ ರಕ್ತ ಪಡೆಯಲು ಸಾಧ್ಯವಾಗುತ್ತಿಲ್ಲ. ಮೊದಲ ಅಲೆಯಲ್ಲಿ ಸೋಂಕು ಇಳಿಕೆಯ ನಂತರ ಸಣ್ಣ ಪ್ರಮಾಣದಲ್ಲಿ ಶಿಬಿರಗಳು ನಡೆಯುತ್ತಿದ್ದವು. ಆದರೆ ಎರಡನೇ ಅಲೆಯಿಂದ ಅದೂ ಸ್ಥಗಿತಗೊಂಡಿದೆ. ಇನ್ನು ಗುಂಪು ಸೇರಬಾರದೆಂಬ ನಿಯಮ ಇರುವುದರಿಂದ ಶಿಬಿರ ಆಯೋಜಿಸಲು ಆಗುತ್ತಿಲ್ಲ. ಇದರಿಂದಾಗಿ ಕೆಲ ರಕ್ತನಿಧಿ ಕೇಂದ್ರಗಳು ಆಸ್ಪತ್ರೆಗಳಿಗೆ ರಕ್ತ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಿವೆ.

ರೋಗಿಗಳಿಗೂ ಸಮಸ್ಯೆ: ಕೋವಿಡ್​ನಿಂದ ರಕ್ತದ ಬೇಡಿಕೆ ಶೇ. 10&20 ಕಡಿಮೆಯಾಗಿದೆ. ರಕ್ತದ ಲಭ್ಯತೆಯಲ್ಲಿ ಶೇ. 60&70 ಇಳಿಕೆಯಾಗಿದೆ. ಲಾಕ್​ಡೌನ್​ನಿಂದಾಗಿ ಅಪಘಾತ ಪ್ರಕರಣಗಳು ಕಡಿಮೆಯಾಗಿವೆ ಯಾದರೂ, ಥಲಸ್ಸೇಮಿಯಾ ರೋಗಿಗಳಿಗೆ, ಕಿಡ್ನಿ ವೈಲ್ಯದಿಂದ ಡಯಾಲಿಸಿಸ್​ ಮಾಡಿಸಿಕೊಳ್ಳುತ್ತಿರುವವರು, ಕ್ಯಾನ್ಸರ್​ ರೋಗಿಗಳು, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತ ಪೂರೈಕೆ ಸವಾಲಾಗಿ ಪರಿಣಮಿಸಿದೆ. ಬಹುತೇಕ ದಾನಿಗಳು ಕರೊನಾದ ಕಾರಣದಿಂದಾಗಿ ರಕ್ತ ದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಬೆಂಗಳೂರು ಶಾಖೆಯ ಅಧಿಕಾರಿಗಳು.

ರಕ್ತ ಸಂಗ್ರಹ ಇಳಿಕೆ
ಕೋವಿಡ್​ಪೂರ್ವದಲ್ಲಿ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ರಾಜ್ಯ ಶಾಖೆ ವರ್ಷಕ್ಕೆ 36&40 ಸಾವಿರ ಯೂನಿಟ್​ ರಕ್ತ ಸಂಗ್ರಹಿಸುತ್ತಿತ್ತು. ಕೋವಿಡ್​ನಿಂದಾಗಿ ಕಳೆದ ವರ್ಷ 20 ಸಾವಿರ ಯೂನಿಟ್​ ರಕ್ತ ಮಾತ್ರ ಸಂಗ್ರಹಿಸಲು ಸಾಧ್ಯವಾಗಿತ್ತು. ಇದೀಗ ಎರಡನೇ ಅಲೆ ತೀವ್ರತೆಯಿಂದಾಗಿ ಆರು ತಿಂಗಳಲ್ಲಿ 7 ಸಾವಿರ ಯೂನಿಟ್​ ರಕ್ತ ಮಾತ್ರ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ಶೇ. 60 ರಕ್ತದ ಕೊರತೆ ಇದೆ ಎನ್ನುತ್ತಾರೆ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಪಾ ಧ್ಯಕ್ಷ ಡಾ. ವಿ.ಎಲ್​.ಎಸ್​. ಕುಮಾರ್​.

ರಕ್ತದಾನದ ಉಪಯೋಗ
ಥಿ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಥಿ ದೇಹದಲ್ಲಿ ಶೇ. 20ರಷ್ಟು ಕೊಲೆಸ್ಟ್ರಾಲ್​ ಕಡಿಮೆ ಯಾಗುತ್ತದೆ. ಥಿ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ. ಥಿ ರಕ್ತ ದಾನದ ಸಂದರ್ಭದಲ್ಲಿ ಆರೋಗ್ಯ ತಪಾಸಣೆಯಿಂದ ಕಾಲಕಾಲಕ್ಕೆ ಆರೋಗ್ಯದ ಮಾಹಿತಿ ಸಿಗುತ್ತದೆ. ಥಿ ಹೃದ್ರೋಗದ ಸಾಧ್ಯತೆ ತಗ್ಗಿಸುತ್ತದೆ

ಯಾರು ರಕ್ತದಾನ ಮಾಡಬಹುದು
* 45 ಕೆ.ಜಿ. ಗಿಂತ ಹೆಚ್ಚು ತೂಕ ಇರುವ ಆರೋಗ್ಯವಂತರು
* ಪುರುಷರಲ್ಲಿ 12&14 ಎಚ್​ಬಿ/ಮಹಿಳೆಯರಲ್ಲಿ 11-13 ಎಚ್​ಬಿ ಇರುವವರು
* ರಕ್ತದ ಒತ್ತಡ ನಿಯಂತ್ರಣದಲ್ಲಿರಬೇಕು
* ಕಳೆದ ಒಂದು ತಿಂಗಳಲ್ಲಿ ಯಾವುದೇ ಸಾಂಕ್ರಾಮಿಕ
* ರೋಗಕ್ಕೆ ಒಳಗಾಗಿರಬಾರದು ಥಿ ಮಾನಸಿಕವಾಗಿ ಸದೃಢರಾಗಿರಬೇಕು

ಲಸಿಕೆಯೂ ಕಾರಣ
ಕೋವಿಡ್​ ಲಸಿಕೆ ಪಡೆದವರು ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎರಡು ವಾರಗಳ ಕಾಲ ರಕ್ತದಾನ ಮಾಡುವಂತಿಲ್ಲ. ಮೊದಲು 28 ದಿನಗಳ ಕಾಲ ಎಂದಿತ್ತು. ಬಳಿಕ 15 ದಿನಕ್ಕೆ ಇಳಿಸಲಾಯಿತು.

ಕೊರತೆ ಆಗದಂತೆ ಕ್ರಮ
ಕರೊನಾ ಸೋಂಕಿನ ಭೀತಿಯಿಂದ ರಕ್ತದಾನ ಶಿಬಿರಕ್ಕೆ ತೊಂದರೆ ಆಗಬಾರದು ಎಂದು ರಕ್ತನಿಧಿ ಕೇಂದ್ರ ಗಳಿಗೆ ಶಿಬಿರದ ಆಯೋಜನೆ, ದಾನಿಗಳ ಆರೋಗ್ಯ ತಪಾಸಣೆ, ಸಂಗ್ರಹಿಸುವ ವಿಧಾನದ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ ಎನ್ನುತ್ತಾರೆ ರಾಜ್ಯ ಏಡ್ಸ್​ ಪ್ರಿವೆನ್ಷನ್​ ಸೊಸೈಟಿಯ (ಕೆಎಸ್​ಎಪಿಎಸ್​) ಅಧಿಕಾರಿಗಳು.

ಯಾರು ರಕ್ತದಾನ ಮಾಡಬಾರದು
1. ಎಚ್​ಬಿ ಪ್ರಮಾಣ ಕಡಿಮೆ ಇರುವವರು
2. ಕೋವಿಡ್​ ಸೋಂಕಿಗೆ ಒಳಗಾಗಿದ್ದಲ್ಲಿ ಮೂರು ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ
3. ಯಾವುದೇ ಸಾಂಕ್ರಾಮಿಕ ಸೋಂಕಿಗೆ ಒಳ ಗಾಗಿದ್ದರೆ ಒಂದು ತಿಂಗಳ ಕಾಲ ರಕ್ತದಾನ ಮಾಡುಬಾರದು
4. ಕೋವಿಡ್​ ಲಸಿಕೆ ಪಡೆದವರು 15 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ

"ಕೋವಿಡ್​ನಿಂದಾಗಿ ರಕ್ತದಾನ ಶಿಬಿರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಅವರಿರುವಲ್ಲಿಗೆ ತೆರಳಿ ಸಣ್ಣ ಪ್ರಮಾಣದಲ್ಲಿ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸಲಾಗುವುದು. ಇಲ್ಲವೇ ರಕ್ತದ ಅಗತ್ಯ ಇದ್ದಲ್ಲಿ ಮೊಬೈಲ್​ ಮೂಲಕ ಸಂದೇಶ ರವಾನಿಸಲಾಗುವುದು. ದಾನಿಗಳು ಅಲ್ಲಿಗೆ ಹೋಗಿ ರಕ್ತದಾನ ಮಾಡಬಹುದಾಗಿದೆ' | ಡಾ. ವಿ.ಎಲ್​.ಎಸ್​. ಕುಮಾರ್​ ಉಪಾಧ್ಯಕ್ಷ, ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net