ಮೋದಿ ಜನ್ಮದಿನ : ರಕ್ತದಾನ ಮಾಡಿದ ರೂಪಾಲಿ ನಾಯ್ಕ

Published on

ಕಾರವಾರ: ಬೃಹತ್ ರಕ್ತದಾನ ಶಿಬಿರ, ಗಣಪತಿ ದೇವಸ್ಥಾನ ಸೇರಿ ವಿವಿಧೆಡೆ ಪೂಜೆ, ವೃದ್ಧಾಶ್ರಮ ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಹಣ್ಣು ವಿತರಣೆ ಮಾಡುವ ಮೂಲಕ ಪ್ರಧಾನ ನರೇಂದ್ರ ಮೋದಿ ಅವರ ಜನ್ಮದಿನವನ್ನು ಬುಧವಾರ ಕಾರವಾರದಲ್ಲಿ ಆಚರಿಸಲಾಯಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪಾಕ್ಷಿಕ ಎಂದು ಪರಿಗಣಿಸಲಾಗಿದ್ದು, ಅಕ್ಟೋಬರ್2 ರವರೆಗೂ ಮುಂದುವರಿಯಲಿದೆ ಎಂದು ರೂಪಾಲಿ ನಾಯ್ಕ ತಿಳಿಸಿದರು.

ಕ್ರಿಮ್ಸ್ ಆಸ್ಪತ್ರೆಯಲ್ಲಿ ಸ್ವತಃ ರೂಪಾಲಿ ನಾಯ್ಕ ಹಾಗೂ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಅವರು ರಕ್ತದಾನ ಮಾಡಿದರು. ರಕ್ತ ದಾನ ಮಾಡಲು 500 ಕ್ಕೂ ಹೆಚ್ಚು ಜನ ತಮ್ಮ ಹೆಸರು ನೋಂದಾಯಿಸಿದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೊಲೆಕರ್, ಮಾಲಾ ಹುಲಸ್ವಾರ್, ಸುನೀಲ ಸೋನಿ, ಸಂಜಯ ಸಾಳುಂಕೆ, ಸಿದ್ದರ ಸುರಭಿ ವೃದ್ಧಾಶ್ರಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ತಾಲೂಕು ಅಧ್ಯಕ್ಷ ದೇವಿದಾಸ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net