

ಗುರುಪುರ: ಅಡ್ಡೂರು ಗ್ರಾಮದ ಕಾಜಿಲದ ವಿಶ್ವ ಹಿಂದು ಪರಿಷತ್ ಬಜರಂಗದಳ ವೀರಾಂಜನೇಯ ಶಾಖೆ ಹಾಗೂ ಕಾಜಿಲ ಬಿಜೆಪಿ ವಾರ್ಡ್ ಸಮಿತಿ ವತಿಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ರಕ್ತಕೇಂದ್ರ ವಿಭಾಗದ ಸಹಯೋಗದಲ್ಲಿ ಭಾನುವಾರ ದಿ.ಉಮೇಶ್ ಕಾಜಿಲ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಯಿತು.
ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರದ ಶಾಸಕ ಡಾ.ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಮನಪಾ ಕಾರ್ಪೊರೇಟರ್ ಲೋಹಿತ್ ಅಮೀನ್, ಪ್ರಮುಖರಾದ ಭುಜಂಗ ಕುಲಾಲ್ ಆದ್ಯಪಾಡಿ, ಸೋಹನ್ ಅತಿಕಾರಿ, ಸೋದನ್ ಆದ್ಯಪಾಡಿ, ಚಂದ್ರಹಾಸ ಶೆಟ್ಟಿ ನಾರಳ, ಮಾಧವ ಕಾಜಿಲ, ವಿಷ್ಣು ಕಾಮತ್, ರಾಜೇಶ್ ಸುವರ್ಣ ಗುರುಪುರ ಮೊದಲಾದವರಿದ್ದರು.
ರಕ್ತದಾನ ಶಿಬಿರದಲ್ಲಿ ಒಟ್ಟು 101 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.