ಶಿವಮೊಗ್ಗದಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ

Traffic police blood donation
ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್‌ಕುಮಾರ್ ರಕ್ತದಾನ ಮಾಡಿದರು. ನವೀನ್‌ಕುಮಾರ್ ಮಠಪತಿ, ತಿರುಮಲೇಶ್ ಇದ್ದರು.
Published on

ಶಿವಮೊಗ್ಗ: ಕೆಲಸದ ಒತ್ತಡದ ನಡುವೆಯೂ ನಗರದ ಎರಡು ಸಂಚಾರ ಠಾಣೆಗಳ 25ಕ್ಕೂ ಅಧಿಕ ಪೊಲೀಸರು ಭಾನುವಾರ ರಕ್ತದಾನ ಮಾಡಿದರು.

ಪೂರ್ವ ಹಾಗೂ ಪಶ್ಚಿಮ ಸಂಚಾರ ಠಾಣೆಗಳು ಹಾಗೂ ಆಶಾ ಜ್ಯೋತಿ ರಕ್ತ ಕೇಂದ್ರದ ಆಶ್ರಯದಲ್ಲಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಡಿ.ಕೆ.ಸಂತೋಷ್‌ಕುಮಾರ್, ಪಿಎಸ್‌ಐಗಳಾದ ನವೀನ್‌ಕುಮಾರ್ ಮಠಪತಿ, ತಿರುಮಲೇಶ್ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net