ಬೆಂಗಳೂರು: ಕರೊನಾ ಗೆದ್ದವರು ನಿಟ್ಟುಸಿರು ಬಿಡುವಷ್ಟರಲ್ಲೇ ಮ್ಯುಕೋರ್ವುಯೋಸಿಸ್ ಅರ್ಥಾತ್ ಬ್ಲಾ್ಯಕ್ ಫಂಗಸ್ ಜೀವಘಾತುಕವಾಗಿ ಬೆನ್ನೇರುತ್ತಿರುವುದು ರಾಜ್ಯದ ವೈದ್ಯಕೀಯ ಕ್ಷೇತ್ರಕ್ಕೆ ಕೋವಿಡ್ ವಿಷಘಳಿಗೆಯಲ್ಲಿ ಹೊಸ ಸವಾಲು ತಂದೊಡ್ಡಿದೆ. ದೆಹಲಿಯಲ್ಲಿ ಹೆಚ್ಚಾಗಿ ಕಂಡುಬಂದಿದ್ದ ಈ ಫಂಗಸ್ ಇದೀಗ ಬೆಂಗಳೂರಿನಲ್ಲೂ ತನ್ನ ಪ್ರಭಾವ ತೋರಿಸಲಾರಂಭಿಸಿದೆ.
ಸೋಂಕಿಗೆ ತುತ್ತಾದ ಮಧುಮೇಹಿಗಳು ಗುಣಮುಖರಾದ ನಂತರ ಶಿಲೀಂಧ್ರ (ಫಂಗಸ್) ದಾಳಿ ಮಾಡುತ್ತಿದೆ. ಪ್ರತಿ ಲಕ್ಷ ಜನರಲ್ಲಿ ಸರಾಸರಿ 10 ಜನರಿಗೆ ಈ ಸೋಂಕು ತಗುಲುತ್ತಿದೆ. ರಾಜ್ಯದಲ್ಲಿ ಈವರೆಗೆ 19 ಲಕ್ಷ ಸೋಂಕಿತರು ಪತ್ತೆಯಾಗಿದ್ದು, ಪ್ರಸ್ತುತ 190-200ಕ್ಕಿಂತ ಹೆಚ್ಚಿನವರಿಗೆ ಶಿಲೀಂಧ್ರ ಹರಡಿರಬಹುದೆಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಗಣನೀಯವಾಗಿ ಹೆಚ್ಚುವ ಆತಂಕವೂ ಇದೆ. ಕರೋನಾಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸ್ಟಿರಾಯ್್ಡ ಬಳಸಲಾಗುತ್ತಿದೆ. ಇದು ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ವೈದ್ಯರ ಅಂದಾಜು. ಆದರೆ, ಹೆಚ್ಚು ಮಧುಮೇಹ ಹೊಂದಿರುವ ರೋಗಿಗಳು ಸ್ಟಿರಾಯ್್ಡ ಬಳಸುವುದರಿಂದ ಸಕ್ಕರೆ ಅಂಶ ಮತ್ತಷ್ಟು ಹೆಚ್ಚಾಗಿ ಫಂಗಸ್ ಬೆಳವಣಿಗೆ ವೃದ್ಧಿಯಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಸ್ಟಿರಾಯ್್ಡ ಹಾಗೂ ಆಂಟಿಬಯಾಟಿಕ್ ನೀಡಲಾಗುತ್ತಿದೆ. ಇದರ ದುಷ್ಪರಿಣಾಮದಿಂದಾಗಿ ಕೆಲವು ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ, ಈ ಬ್ಲಾ್ಯಕ್ ಫಂಗಸ್ ಅಥವಾ ಮ್ಯುಕೋರ್ವುಯೋಸಿಸ್ ಆಕ್ರಮಣ ಮಾಡಿ ರೋಗಿಗಳನ್ನು ತೊಂದರೆಗೆ ಸಿಲುಕಿಸುತ್ತದೆ ಎಂಬ ಮಾಹಿತಿ ಇದೆ.
ವೈದ್ಯರ ಸಲಹೆ ಸ್ಟಿರಾಯ್್ಡ ಇಲ್ಲದೆ ತಪ್ಪು ಬಳಕೆಯಿಂದ ಮಧುಮೇಹ ರೋಗಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಅಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿದ ಸಂದರ್ಭದಲ್ಲಿ ಈ ಫಂಗಸ್ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆಕ್ಸಿಜನ್ ಹ್ಯೂಮಿಡಿಫೈರ್ನಲ್ಲಿ ಬಳಸುವ ನೀರನ್ನು ಸ್ಟೆರಲೈಸ್ ಮಾಡದೇ ಇದ್ದ ಸಂದರ್ಭದಲ್ಲೂ ಫಂಗಸ್ ರೋಗಿಗೆ ಬರುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಟ್ರಸ್ಟ್ವೆಲ್ ಆಸ್ಪತ್ರೆ ವೈದ್ಯ ಡಾ.ಎಚ್.ವಿ.ಮಧುಸೂಧನ್ ಪ್ರಕಾರ, ಕಳೆದ 2 ವಾರದಲ್ಲಿ ಅವರ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಬ್ಲಾ್ಯಕ್ ಫಂಗಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೊಂದು ಸೈಲೆಂಟ್ ಕಿಲ್ಲರ್ ಸೋಂಕು ಆಗಿದ್ದು, ಕೇವಲ 2 ವಾರದಲ್ಲಿ 38 ಜನರಿಗೆ ಸೋಂಕು ತಗುಲಿರುವುದು ಬಹಳ ಆತಂಕಕಾರಿ ವಿಷಯವಾಗಿದೆ ಎಂದು ವಿವರಿಸುತ್ತಾರೆ.

ಸಮಸ್ಯೆಗಳೇನು?: ಕರೊನಾದಿಂದ ಗುಣವಾದ ಬಳಿಕ ರೋಗಿಯ ಮೂಗಿನಲ್ಲಿ ರಕ್ತದ ಕಲೆ ಕಾಣಿಸಿ, ಬಳಿಕ 12ರಿಂದ 24 ಗಂಟೆಯಲ್ಲೇ ಕಣ್ಣುಗುಡ್ಡೆಯ ಸುತ್ತ ಊತ ಕಾಣಿಸಿಕೊಳ್ಳುವ ಜತೆಗೆ ಕಣ್ಣುಗಳ ಸುತ್ತಲಿನ ರಕ್ತನಾಳಗಳಿಗೆ ಬೇಗನೆ ಹರಡುತ್ತದೆ. ಇದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಪಾರ್ಶ್ವವಾಯು ಸಮಸ್ಯೆ ಎದುರಿಸಿದ ಉದಾಹರಣೆಗಳೂ ಇವೆ.
ಕೋವಿಡ್ಗಿಂತ ಮೊದಲೇ ಇತ್ತು: ಕರೊನಾ ವೈರಸ್ ಕಾಣಿಸಿಕೊಳ್ಳುವುದಕ್ಕಿಂತ ಮೊದಲೂ ಈ ಶಿಲೀಂಧ್ರವಿತ್ತು. ಪ್ರತಿವರ್ಷ ಕೆಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಬೇರೆ ಬೇರೆ ಸಮಸ್ಯೆ ಎದುರಿಸಿದ್ದಾರೆ. ಆದರೆ, ಕರೋನಾ ಬಂದ ನಂತರ ಇದರ ತೀವ್ರತೆ ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ, ಮುಖ್ಯವಾಗಿ ಸಕ್ಕರೆ ಕಾಯಿಲೆ ಇರುವವರು ಕರೋನಾ ಸೋಂಕಿನಿಂದ ಗುಣಮುಖರಾದ ನಂತರ ಎಚ್ಚರಿಕೆ ವಹಿಸಬೇಕಾಗುತ್ತದೆ.