

ನವದೆಹಲಿ: ಕರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದರೂ, ಕಳೆದ ಮೂರು ವಾರಗಳಲ್ಲಿ ಕಪ್ಪು ಶಿಲೀಂಧ್ರ ಕೇಸ್ಗಳ ಸಂಖ್ಯೆ ಶೇಕಡ 150 ಹೆಚ್ಚಳವಾಗಿದೆ. 31,216 ಮಂದಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. 2,109 ಜನರು ಮರಣಿಸಿರುವುದು ಕಳವಳ ಮೂಡಿಸಿದೆ.
ಸೋಂಕು ಹೆಚ್ಚಾಗಿರುವ ಕಾರಣ ಇದರ ಚಿಕಿತ್ಸೆಗೆ ಅಗತ್ಯವಿರುವ ಆ್ಯಂೋಟೆರಿಸಿನ್ ಬಿ ಕೊರತೆ ಕಾಣಿಸಿಕೊಂಡಿದೆ. ಕಪ್ಪು ಶಿಲೀಂಧ್ರ ಸೋಂಕಿಗೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 7.057 ಜನ ಬಳಲಿದ್ದು, 609 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ನಲ್ಲಿ 5,418 ಕೇಸ್, 323 ಸಾವು, ರಾಜಸ್ಥಾನದಲ್ಲಿ 2,976 ಕೇಸ್ 150ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಉತ್ತರ ಪ್ರದೇಶದಲ್ಲಿ 1,744 ಕೇಸ್, 142 ಸಾವು ಸಂಭವಿಸಿದೆ. ದೆಹಲಿಯಲ್ಲಿ 1,200 ಕೇಸ್ 125 ಸಾವು ಸಂಭವಿಸಿದೆ.
ಅಮೆರಿಕದಲ್ಲಿ ಕೊವ್ಯಾಕ್ಸಿನ್ಗೆ ಅನುಮತಿ ಇಲ್ಲ: ಅಮೆರಿಕ ದಲ್ಲಿ ಕೊವ್ಯಾಕ್ಸಿನ್ ತುರ್ತುಬಳಕೆಗೆ ಅನುಮತಿ ಸಿಕ್ಕಿಲ್ಲ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಬಳಕೆಗೆ ಬಯಾಲಾಜಿಕ್ಸ್ ಲೈಸೆನ್ಸ್ ಅಪ್ಲಿಕೇಶನ್ (ಬಿಎಲ್ಎ) ಸಲ್ಲಿಸಿ ಅನುಮತಿ ಪಡೆಯುವಂತೆ ಅಮೆರಿಕದ ುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೆಶನ್ ಸೂಚಿಸಿದೆ. ಅಮೆರಿಕದಲ್ಲಿ ಕೊವ್ಯಾಕ್ಸಿನ್ ಅನ್ನು ಅಲ್ಲಿನ ಪಾಲುದಾರ ಕಂಪನಿ ಒಕುಜೆನ್ ಮಾರ್ಕೆಟಿಂಗ್ ಮಾಡುತ್ತಿದ್ದು ಈಗ ಬಿಎಲ್ಎ ಮೂಲಕ ಪರವಾನಗಿ ಪಡೆಯಲು ಪ್ರಯತ್ನ ನಡೆಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
100 ಕೋಟಿ ಲಸಿಕೆ ನೀಡಲಿವೆ ಜಿ&7 ರಾಷ್ಟ್ರಗಳು ಜಗತ್ತಿಗೆ 100 ಕೋಟಿ ಲಸಿಕೆ ಪೂರೈಸುವುದಕ್ಕೆ ಜಿ&7 ರಾಷ್ಟ್ರಗಳು ಬದ್ಧತೆ ವ್ಯಕ್ತಪಡಿಸಿವೆ. ಇದರಲ್ಲಿ 50 ಕೋಟಿ ಲಸಿಕೆಯನ್ನು ಅಮೆರಿಕ, 10 ಕೋಟಿ ಲಸಿಕೆಯನ್ನು ಬ್ರಿಟನ್ ಪೂರೈಸಲಿದೆ. ಇನ್ನು ಉಳಿದ ಲಸಿಕೆಯನ್ನು ಕೆನಡಾ, ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ಗಳು ಪೂರೈಸಲಿವೆ.
ಭಾರತವನ್ನು ಕಂಗೆಡಿಸಿದ ಡೆಲ್ಟಾ ವೇರಿಯೆಂಟ್ (ಬಿ.1.617.2) ಸೋಂಕಿನ ಅಬ್ಬರ ಮುಗಿಯಿತು. ಲಸಿಕೆ ನೀಡುವಿಕೆಯ ನಡುವಿನ ಅಂತರವನ್ನು ಸೂಕ್ಷ$್ಮವಾಗಿ ಅವಲೋಕಿಸಲಾಗುತ್ತಿದೆ. 2ರಿಂದ 18ರ ವಯೋಮಾನದವರಿಗೆ ಲಸಿಕೆ ನೀಡುವ ಟ್ರಯಲ್ ನಡೆಯುತ್ತಿದ್ದು ಶ್ರೀವೇ ಲಿತಾಂಶ ಬರಲಿದೆ. ವರ್ಷಾಂತ್ಯಕ್ಕೆ ಅವರಿಗೂ ಲಸಿಕೆ ಲಭ್ಯವಾಗಲಿದೆ. | ಡಾ.ಎನ್.ಕೆ.ಅರೋರಾ ನ್ಯಾಷನಲ್ ಟೆಕ್ನಿಕಲ್ ಅಡ್ವೆ$ಸರಿ ಗ್ರೂಪ್ ಆನ್ ಇಮ್ಯೂನೈಸೇಷನ್ ಇನ್ ಇಂಡಿಯಾದ ಮುಖ್ಯಸ್ಥ