ಬ್ಲಾಕ್ ಈಗಲ್ಸ್ ತಂಡದ ಮುಡಿಗೆ ಕ್ರಿಕೆಟ್ ಕಪ್

HUN-DEC-19-6(HPL CUP HK HALLI)
???????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹುಣಸೂರು: ತಾಲೂಕಿನ ಹಿರೀಕ್ಯಾತನಹಳ್ಳಿಯಲ್ಲಿ ಆಯೋಜಿಸಿದ್ದ ಹಿರೀಕ್ಯಾತನಹಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಕಪ್ ಅನ್ನು ಗ್ರಾಮದ ಬ್ಲಾಕ್ ಈಗಲ್ಸ್ ತಂಡ ಮುಡಿಗೇರಿಸಿಕೊಂಡಿತು.


ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪಂದ್ಯಾವಳಿಯಲ್ಲಿ ಅಭಿವಾರಿಯರ್ಸ್ ತಂಡ ದ್ವಿತೀಯ ಹಾಗು ಟ್ರೋಫಿ ಫೈಟರ್ಸ್‌ ತಂಡ ಗಳಿಸಿತು.


ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ನಾಗರಾಜ್, ಕ್ರೀಡಾಕೂಟಗಳು ಯುವಸಮೂಹದಲ್ಲಿ ಭಾತೃತ್ವ, ಸ್ನೇಹಪರತೆಯನ್ನು ಉದ್ದೀಪಿಸುವ ವೇದಿಕೆಗಳಾಗಿವೆ. ಯುವಕರು ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಭಾರತೀಯ ಸೇನೆ ಸೇರಲು ವಿವಿಧ ಉದ್ಯೋಗಗಳಲ್ಲಿ ಕ್ರೀಡಾ ಕ್ಷೇತ್ರದಿಂದ ಮೀಸಲಾದ ಹುದ್ದೆಗಳಿಗೆ ಸಹಾಯವಾಗಲಿದೆ. ಜತೆಗೆ, ಕ್ರೀಡೆ ಯಾವುದೇ ಇರಲಿ ಶ್ರದ್ಧೆ, ಆಸಕ್ತಿ ಮುಖ್ಯ. ಕ್ರೀಡೆ ಜೀವನದಲ್ಲಿ ಶಿಸ್ತು ಕಲಿಸುತ್ತದೆ, ಬುದ್ಧಿಮತ್ತೆ ಹೆಚ್ಚಿಸುತ್ತದೆ ಎಂದರು.


ಜಿಲ್ಲಾ ಪತ್ರ ಬರಹಗಾರ ಜಗದೀಶ್ ಮಾತನಾಡಿ, ಯುವಕರು ಕ್ರೀಡೆಯನ್ನು ಸ್ನೇಹ ಪೂರಕವಾಗಿ ಭಾಗವಹಿಸಿ ಗ್ರಾಮಕ್ಕೆ ಕೀರ್ತಿ ತನ್ನಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ನಂಜೇಗೌಡ, ಟೂರ್ನಿಯ ಆಯೋಜಕ ಆದರ್ಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net