ಬಿಜೆಪಿ ಅವರದ್ದು ಕೈಲಾಗದನು ಮೈ ಪರಚಿಕೊಂಡ ಸ್ಥಿತಿ: ಸಚಿವ ಪ್ರಿಯಾಂಕ್ ವ್ಯಂಗ್ಯ

BLS Priyank Kharge
Published on

ಬೆಂಗಳೂರು ‘ಬಿಜೆಪಿ ಅವರಿಗೆ ಮಾಡೋಕೆ ಕೆಲಸವಿಲ್ಲ. ಕೈಲಾಗದವನು ಮೈ ಪರಚಿಕೊಂಡ’ ಎಂಬ ಸ್ಥಿತಿ ಆಗಿದೆ. ಸರ್ಕಾರ ಬಂದು 100 ದಿನ ಕಳೆದರೂ, ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಆಗಿಲ್ಲ. ಕೆಲಸವಿಲ್ಲದೆ ದಿನಕ್ಕೊಬ್ಬರ ಬಗ್ಗೆ ಮಾತನಾಡುತ್ತಾರೆ. ಇವತ್ತು ನನ್ನ ಬಗ್ಗೆ, ನಾಳೆ, ಎಂ.ಬಿ. ಪಾಟೀಲ್. ನಾಡಿದ್ದು ಮತ್ತೊಬ್ಬರ ಬಗ್ಗೆ ಮಾತನಾಡುತ್ತಾರೆ. ಮಾತನಾಡಲಿ ಬಿಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಶಾಸಕರಾದ ಬಿ.ಆರ್. ಪಾಟೀಲ್ ಮತ್ತು ಅಜಯ್ ಸಿಂಗ್ ಅಸಮಾಧಾನಗೊಂಡಿದ್ದಾರೆಂದು ಬಿಜೆಪಿ ಟ್ವೀಟ್ ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಲಿಂಗಾಯತ ನಾಯಕತ್ವವನ್ನು ಮುಗಿಸಲು ಬಿ.ಎಲ್. ಸಂತೋಷ್ ಪ್ರಯತ್ನ ಮಾಡಿದರು. ಟಿಕೆಟ್ ಹಂಚಿಕೆಯಲ್ಲಿ ದೆಹಲಿ ನಾಯಕರು ಪ್ರಭಾವ ಬೀರಿದರು ಎಂದು ಅವರದೇ ಪಕ್ಷದ ರೇಣುಕಾಚಾರ್ಯ ಸೇರಿ ಇತರೆ ಹಾಲಿ, ಮಾಜಿ ಶಾಸಕರು ಮಾತನಾಡಿರುವುದಕ್ಕೆ ಉತ್ತರ ನೀಡಲಿ. ಮೊದಲು ಅವರ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net