ಹಿಮಾಚಲ ಪ್ರದೇಶ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಕಾಂಗ್ರೆಸ್​ ಅಭಿಷೇಕ್ ಮನು ಸಿಂಘ್ವಿಗೆ ಸೋಲು!

nasir
Published on

ನವದೆಹಲಿ: 68 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಕೇವಲ 25 ಶಾಸಕರನ್ನು ಹೊಂದಿದ್ದರೂ ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗೆ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಅಡ್ಡಮತದಾನದ ಪರಿಣಾಮ ಅಭಿಷೇಕ್ ಮನು ಸಿಂಘ್ವಿ ಸೋಲು ಕಂಡಿದ್ದಾರೆ. ಸಿಂಘ್ವಿ ವಿರುದ್ಧ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಗೆದ್ದಿದ್ದಾರೆ.

ಇಬ್ಬರೂ ಅಭ್ಯರ್ಥಿಗಳ ಪರವಾಗಿ ತಲಾ 34 ಮತಗಳು ಚಲಾವಣೆಯಾಗಿತ್ತು. ಅಂತಿಮವಾಗಿ ಚೀಟಿ ಎತ್ತುವ ಮೂಲಕ ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು.68 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 40 ಶಾಸಕರನ್ನು ಹೊಂದಿರುವ ಮತ್ತು ಸ್ವತಂತ್ರರ ಬೆಂಬಲವನ್ನು ಪಡೆದಿರುವ ಕಾಂಗ್ರೆಸ್‌ಗೆ ಇದು ದೊಡ್ಡ ಆಘಾತವಾಗಿದೆ.

ಕಾಂಗ್ರೆಸ್ ಶಾಸಕರು ‘ಆತ್ಮಸಾಕ್ಷಿಯ ಮತ’ ಚಲಾಯಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿ ಪರವಾಗಿ ಒಂಬತ್ತು ಶಾಸಕರು ಮತ ಚಲಾಯಿಸಿದ್ದಾರೆ ಎಂದು ಫಲಿತಾಂಶ ಸ್ಪಷ್ಟಪಡಿಸಿದೆ. ಪ್ರಸ್ತುತ ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದೆ.

ಹರ್ಷ್ ಮಹಾಜನ್ ಅವರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಅವರು ಗೆದ್ದಿದ್ದಾರೆ. ಅವರು ನನ್ನ ಅಭಿನಂದನೆಗೆ ಅರ್ಹರು. ಆತ್ಮಾವಲೋಕನ ಮಾಡಿ ಮತ್ತು ಯೋಚಿಸಿ ಎಂದು ನಾನು ಅವರ ಪಕ್ಷಕ್ಕೆ ಹೇಳಲು ಬಯಸುತ್ತೇನೆ. 25 ಸದಸ್ಯರ ಪಕ್ಷವು 43 ಸದಸ್ಯರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿದಾಗ ಅದರಲ್ಲಿರುವುದು ಒಂದೇ ಸಂದೇಶ. ಅದೇನೆಂದರೆ ಕಾನೂನಿನಿಂದ ಅನುಮತಿಸದ ಕೆಲಸವನ್ನು ನಾವು ನಿರ್ಲಜ್ಜವಾಗಿ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net