ಮಹಾರಾಷ್ಟ್ರದಲ್ಲಿ ಶೀಘ್ರವೇ ನಡೆಯಲಿದೆ ರಾಜಕೀಯ ಸಂಚಲನ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸುಳಿವು

jp nadda
Published on

ಮುಂಬೈ: ಮಹಾರಾಷ್ಟ್ರದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕರೂ 'ವಂಚನೆ'ಯಾಗಿದೆ. ಆದಾಗ್ಯೂ, ಶೀಘ್ರವೇ ಬಿಜೆಪಿ ಸ್ವಬಲದಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಮುಂಬೈನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 2019ರ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶ ನಮ್ಮ ಪರವಾಗಿತ್ತು. ಆದರೆ, ನಾವು ಮೋಸಹೋದೆವು. ಶೀಘ್ರವೇ ಮಹಾರಾಷ್ಟ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಬರಲಿದೆ. ಆಡಳಿತದಲ್ಲಿರುವ ಮೂರೂ ಪಕ್ಷಗಳು ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಈ ಮೈತ್ರಿಕೂಟದ ಸ್ಥಾನ ಭ್ರಷ್ಟಗೊಳಿಸುತ್ತೇವೆ. ಈ ಬಗ್ಗೆ ಕಾರ್ಯಕರ್ತರಿಗೆ ನಾನು ಭರವಸೆ ನೀಡುತ್ತದೆ ಎಂದರು.

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂದರೆ, ಆಡಳಿತ ನಡೆಸುತ್ತಿರುವವರು ಯಾರು ಎಂಬುದೇ ಇಲ್ಲಿ ಜನರಿಗೆ ಗೊತ್ತಾಗುತ್ತಿಲ್ಲ. ಬಲಗೈ ಏನು ಮಾಡುತ್ತಿದೆ ಎಂದು ಎಡಗೈಗೆ ಗೊತ್ತಾಗದ ಪರಿಸ್ಥಿತಿ ಇದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಬೇಕು ಎಂದು ಬಹಳ ಜನ ಆಸೆಪಡುತ್ತಿದ್ದಾರೆ. ಶೀಘ್ರವೇ ನಾವು ಇಲ್ಲಿ ಆಡಳಿತ ಪಕ್ಷದ ಸ್ಥಾನದಲ್ಲಿ ಇರಲಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net